ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್ ಸೇವಿಸಿ ಆಫ್ರಿಕಾದ 66 ಮಕ್ಕಳು ಮೃತಪಟ್ಟಿದ್ದಾರೆ. ಎಂದು ವಿಶ್ವ ಆರೋಗ್ಯ ಸಂಸ್ಥೆ ಅನುಮಾನಿಸಿದ್ದು, ತಕ್ಷಣವೇ ತನಿಖೆ ನೆಡೆಯುವಂತೆ ಕೇಂದ್ರ ಔಷಧಿ ನಿಯಂತ್ರಕ ಮಂಡಳಿಗೆ ಸೂಚನೆ ನೀಡಿದೆ.
ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧಿವನ್ನು ತಯಾರಿಸಿದೆ. ಕೆಮ್ಮು, ಶೀತಕ್ಕಾಗಿ ಈ ಸಿರಪ್ ನೀಡಲಾಗಿದ್ದು, ಇದರ ಸೇವನೆಯಿಂದ ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿದ್ದಾರೆ. ಕಂಪನಿ ಸಿರಪ್ ತಯಾರಿಸಿ ಗ್ಯಾಬಿಯಾಗೆ ರಫ್ತು ಮಾಡಿತ್ತು.
ಇದರಿಂದ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದು, ಈ ಕಂಪನಿ ತಯಾರಿಸಿರುವ 4 ಸಿರಪ್ ಗಳ ಮೇಲೆ ತನಿಖೆ ನೆಡೆಸಲು ಕೋರಿದೆ.
ವಿಶ್ವ ಸಂಸ್ಥೆ ಸೂಚನೆ ಮೇರೆಗೆ ತನಿಖೆ ಆರಂಭವಾಗಿದ್ದು, ಶೀಘ್ರವೇ ವರದಿ ತಿಳಿಸುವುದಾಗಿ ತಿಳಿಸಿದೆ.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.