ಚಾಮರಾಜನಗರ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ

ಚಾಮರಾಜನಗರ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ

ಚಾಮರಾಜನಗರ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದ ಹನೂರು ವಿಧಾನಸಭಾ ಕ್ಷೇತ್ರದ ಎಂ.ಆರ್.ಮಂಜುನಾಥ್

ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂದೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿಕಲಚೇತನರಿಗೆ ದ್ವಿಚಕ್ರ ವಾಹನವನ್ನು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ವಿಕಲ ಚೇತನರಿಗೆ ದ್ವಿಚಕ್ರ ವಾಹನವನ್ನು ವಿತರಣೆ ಮಾಡಿ ಮಾತನಾಡಿದ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ರವರು ಮಾತನಾಡಿ ವಿಕಲಚೇತನರು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಓಡಾಡಲು ಬಸ್ಸು ಹಾಗೂ ಆಟೋಗಳನ್ನು ಆಶ್ರಯಿಸಿಕೊಂಡಿರುತ್ತಾರೆ.ಆದ್ದರಿಂದ ಇವರ ಕೆಲಸ ಕಾರ್ಯಗಳು ತಕ್ಕ ಸಮಯದಲ್ಲಿ ಪೂರ್ಣಗೊಳ್ಳದೆ ಕುಂಠಿತವಾಗುತ್ತದೆ. ಆದ್ದರಿಂದ ಇವರುಗಳಿಗೆ ಅನುಕೂಲವಾಗುವಂತೆ ದ್ವಿಚಕ್ರ ವಾಹನಗಳನ್ನು ನಮ್ಮ ಅನುದಾನದಲ್ಲಿ ನೀಡಿದ್ದೇನೆ ಆದ್ದರಿಂದ ವಿಕಲಚೇತನರುಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಕಿವಿ ಮಾತು ಹೇಳಿದರು.

ವರದಿ: ನಂದಿನಿ ಮೈಸೂರು.

Leave a Reply

Your email address will not be published. Required fields are marked *