ಚಿಕ್ಕಮಂಗಳೂರು: ಸಿದ್ದರಾಮಯ್ಯರಿಗೆ ಮತ್ತೆ ಕಪ್ಪು ಬಾವುಟ ಪ್ರದರ್ಶನ.
ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಶುಕ್ರವಾರವು ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊಪ್ಪ ತಾಲೂಕಿನ ಮಕ್ಕಿಕೊಪ್ಪ ಗ್ರಾಮದಲ್ಲಿ ಸಾವರ್ಕರ್ ಬಗ್ಗೆ ಹೇಳಿಕೆಗೆ ಹಿಂದುಪರ ಸಂಘಟನೆಗಳು ಕಿಡಿಕಾರಿದ್ದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ ನಿನ್ನೆ “ಗೋ ಬ್ಯಾಂಕ್ ಸಿದ್ದು” ಅಭಿಯಾನ ಆರಂಭಿಸಿದ ಸಂಘಟನೆಗಳು ಹಿಂದೂ ವಿರೋಧಿ ”ಸಿದ್ದು, ಈ ಪುಣ್ಯಭೂಮಿಗೆ ಬರುವುದು ಬೇಡ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಕಪ್ಪು ಬಾವುಟ ಹಿಡಿಯಲಾಯಿತು. ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು ,ಕಪ್ಪು ಬಟ್ಟೆ ,ಬಿಜೆಪಿ ಶಾಲು, ಸಾವರ್ಕರ್ ಫೋಟೋ, ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು..
ಶೃಗೇರಿ ಸಮೀಪದ ಮೆಣಸೆ ಗ್ರಾಮದಲ್ಲಿ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದಾರೆ.
ರಸ್ತೆ ಮದ್ಯೆ ಎರಡು ಪಕ್ಷದ ಕಾರ್ಯಕರ್ತರು ಮುಖಾಮುಖಿಯಾಗಿದ್ದು, ಎಎಸ್ಪಿ ಎದುರೇ ಎರಡು ಪಕ್ಷದವರಿಂದ ಪರಸ್ಪರ ತಳ್ಳಾಟ ನೂಕಾಟ ನಡೆದಿದೆ ,ಎಂದು ತಿಳಿದುಬಂದಿದೆ.
ವರದಿ: ಸಿಂಚನಾ ಜಯಂತ್ ಬಲೇಗರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.