
ಹುಣಸೂರು: ಬೈಕ್‌ಗೆ ಟ್ರಾಕ್ಟರ್ ಡಿಕ್ಕಿ ಸವಾರ ಸಾವು
ಟ್ರಾಕ್ಟರ್ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ಪ್ರಾನಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ರತ್ನಪುರಿ ರಸ್ತೆಯ ಸಣ್ಣೇಗೌಡರ ಕಾಲೋನಿ ಬಳಿಯಲ್ಲಿ ನಡೆದಿದೆ. ಧರ್ಮಾಪುರ ಗ್ರಾಮ ಪಂಚಾಯ್ತಿ ವಾಟರ್ ಮೆನ್ ತರಿಕಲ್ ಗ್ರಾಮದ ನಿವಾಸಿ ಕುಮಾರ್‌ರ ಪುತ್ರ ಮನುಕುಮಾರ್(22) ಮೃತಪಟ್ಟಾತ.

ಮನುಕುಮಾರ್ ತನ್ನ ಸ್ನೇಹಿತನೊಂದಿಗೆ ಹುಣಸೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಜಲ್ಲಿ ತುಂಬಿದ್ದ ಟ್ರಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಮುಖ,ಎದೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.