
ಬೆಂಗಳೂರಿನಲ್ಲಿ ಸೋಮವಾರ ಬೆಂಗಳೂರು ಟೆಕ್ ಸಮ್ಮೇಳನ ಸಭೆ – ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಐಟಿಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಮುಖ ಉದ್ಯಮಿಗಳ ಜತೆ ಉಪಹಾರ ಸಭೆ ನಡೆಸಿದರು. ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ನಿರ್ದೇಶಕ ಎಚ್ ವಿ ದರ್ಶನ್, ವಿಜಿಐಟಿ ಛೇರ್ಮನ್ ಕ್ರಿಶ್ ಗೋಪಾಲಕೃಷ್ಣ, ಹನಿವೆಲ್ ಟೆಕ್ನಾಲಜಿ ಸಲ್ಯೂಷನ್ಸ್ ಅಧ್ಯಕ್ಷ ಕುನಾಲ್ ರುವಾಲ, ಇಂಟಲ್ ಇಂಡಿಯಾ ಎಂಡಿ ಸಂತೋಷ್ ವಿಶ್ವನಾಥನ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಜುಬಿಲಿಯನ್ಟ್ ಬಯೋಸಿಸ್ ನ ಜಿ ಕೆ ರಾಮನ್, ನೋ ಬ್ರೋಕರ್ ಸಹ ಸಂಸ್ಥಾಪಕ ಅಖಿಲ್ ಗುಪ್ತ, ಏಬಲ್ ಅಧ್ಯಕ್ಷ ಜಿ ಎಸ್ ಕೃಷ್ಣನ್, ನಾಸ್ಕಾಂ ಕರ್ನಾಟಕ ಮುಖ್ಯಸ್ಥ ಭಾಸ್ಕರ್ ವರ್ಮಾ ಮತ್ತಿತರರು ಭಾಗವಹಿಸಿದ್ದರು.

ವರದಿ: ರಂಜನ್ ಶೆಟ್ಟಿ