
ಸಕಲೇಶಪುರ : ಸುಶೀಲಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ.

ನಿಧನರಾದ ಮಾಜಿ ಶಾಸಕ ದಿ. ಬಿ ಬಿ ಶಿವಪ್ಪ ಅವರ ಪತ್ನಿ ರಾಜ್ಯ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸುಶೀಲಾ ಶಿವಪ್ಪನವರ ಅಂತಿಮ ದರ್ಶನವನ್ನು ಶೋಭಾ ಕರಂದ್ಲಾಜೆ ಕೇಂದ್ರ ಸಚಿವರು ಪಡೆದು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿ ಪಕ್ಷಕ್ಕೆ ಶಿವಪ್ಪ ಹಾಗೂ ಅಮ್ಮನವರ ಕೊಡುಗೆ ಅಪಾರವಾದದ್ದು. ಪಕ್ಷವು ಸಂಕಷ್ಟ ಸಮಯದಲ್ಲಿ ಇದ್ದಾಗಲೂ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ಪಕ್ಷ ಕಟ್ಟಿದ ಹೆಗ್ಗಳಿಕೆ ಬಿ.ಬಿ ಶಿವಪ್ಪ ಹಾಗೂ ಸುಶೀಲಮ್ಮನವರಿಗೆ ಸಲ್ಲುತ್ತದೆ ಎಂದರು . ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸೇರಿದಂತೆ ಇನ್ನಿತರರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.