“ಕಸದಿಂದ ರಸ”

ಬೆಂಗಳೂರು: ಕಸ ನೋಡಿದ್ರೆ ಸಾಕು ಜನ ಮೂಗು ಮುಚ್ಚಿಕೊಂಡು ಹೋಗುವುದು ಸಾಮಾನ್ಯ.

ನಾವು ಬಿಸಾಡುವ ಕಸ ಒಂದಲ್ಲ ಒಂದು ರೂಪದಲ್ಲಿ ನಮಗೆ ಸಹಾಯವಾಗುತ್ತದೆ.ನಾವೆಲ್ಲ ಮನೆಯಿಂದ ಹೊರ ಹಾಕುವ ಕಸ ಶೇಖರಿಸಿ ಆಹಾರ ಬೆಳೆಗೆ ಉಪಯೋಗವಾಗುವ ಗೊಬ್ಬರ ತಯಾರುತ್ತದೆ.

ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿ ಕಸದಿಂದ ರಸ ಎಂಬ ಶಿರ್ಷಿಕೆಯಡಿಯಲ್ಲಿ ಇದೇ ಮೊದಲ ಬಾರಿಗೆ
ಮಳಿಗೆ ನಿರ್ಮಿಸಿ ಕಸದಿಂದ ಗೊಬ್ಬರ ಹೇಗೆ ತಯಾರಾಗುತ್ತದೆ.ಆ ಗೊಬ್ಬರ ರೈತ ಬೆಳೆಗೆ ಎಷ್ಟು ಸಹಕಾರಿಯಾಗಲಿದೆ ಎಂಬುದರ
ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಪ್ರತಿ ದಿನ 5 ಲಕ್ಷ ಟನ್ ಕಸ ಸಂಗ್ರಹವಾಗುತ್ತದೆ.ಒಣ ಕಸ ,ಹಸಿ ಕಸ ಎರಡನ್ನು ಬೇರೆ ಬೇರೆ ಸಂಗ್ರಹಿಸಲಾಗುತ್ತದೆ. ಹಸಿ ಕಸ ಮಾತ್ರ ತೆಗೆದುಕೊಂಡ ಗೊಬ್ಬರ ತಯಾರಿಸುತ್ತಿದೆ.
ರೈತರು ವಿಷ ಮಿಶ್ರಿತ ಗೊಬ್ಬರ ಬಳಸಿದರೇ ಬೆಳೆ ಹಾಳಾಗಲಿದೆ.ಆದ್ದರಿಂದ ರೈತರು ಕಸದಿಂದ ತಯಾರಾದ ಗೊಬ್ಬರ ತೆಗೆದುಕೊಂಡು ಬೆಳೆಗೆ ಸಿಂಪಡಣೆ ಮಾಡುವುದರಿಂದ ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭ ಪಡೆಯಬಹುದಾಗಿದೆ.

ವಸ್ತು ಪ್ರದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ, ರೈತರಿಗೆ, ಜನರಿಗೆ ಮಕ್ಕಳಿಗೆ ಕಸದಿಂದ ತಯಾರಾಗುವ ಗೊಬ್ಬರ, ಅದರ ಪ್ರಾಮುಖ್ಯತೆ, ಬೆಳೆಗೆ ಬಳಸುವ ಪ್ರಮಾಣ,ಎರೆಹುಳು ಗೊಬ್ಬರ ಹೇಗಿರಲಿದೆ ಎಂಬ ಮಾಹಿತಿ ನೀಡಲಾಗುತ್ತಿದೆ.

ಮಾಹಿತಿ ತಿಳಿದ ನಂತರ ಜನರಿಗೊಂದು ಪ್ರತಿಜ್ಞೆ ಫಲಕ

ಯೋಚಿಸಿ, ನಿರ್ಧರಿಸಿ, ಇಂದೇ ಪ್ರತಿಜ್ಞೆ ಮಾಡಿ ! !! !!

  • ಇಂದಿನಿಂದ ನಾನು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದಿಲ್ಲ.
  • ನಾನು ಹಸಿ ಕಸ, ಒಣ ಕಸ ಬೇರ್ಪಡಿಸಿ ಕಸ ಸಂಗ್ರಹದಾರರಿಗೆ ಕೊಡುತ್ತೇನೆ.
  • ಕಸದಿಂದ ತಯಾರಾದ ಉತ್ಕೃಷ್ಟ ಕಾಂಪೋಸ್ಟ್ (ಸಾವಯವ ಗೊಬ್ಬರ)ದಿಂದ ರೈತನ ಬಾಳು ಹಸನಾದರೆ ಅದಕ್ಕಿಂತ ಉತ್ತಮ ಕಾರ್ಯ ಬೇರೊಂದಿಲ್ಲ.
  • ಕಸವನ್ನು ಎಲ್ಲೆಂದರಲ್ಲಿ ಎಸೆದರೆ ಪರಿಸರ ಕಲುಷಿತಗೊಳ್ಳುವುದು ಹಾಗೂ ರೋಗರುಜಿನ ಬರುವುದು.

ನನ್ನ ಜೊತೆಗೆ ಅಕ್ಕಪಕ್ಕದ ಮನೆಯವರಿಗೂ ಕಸದ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಂದು ಇಂದೇ ಪ್ರತಿಜ್ಞೆ ಮಾಡುತ್ತೇನೆ.

ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಸವನ್ನು ಶೇಖರಣೆ ಮಾಡಿ ಅದರಿಂದ ಸಾವಯವ ಗೊಬ್ಬರ ತಯಾರಿಸಲಾಗಿದೆ.
ರೈತರಿಗೆ
ನಿಗಮದಿಂದ ಕಡಿಮೆ ಬೆಲೆಗೆ ಗೊಬ್ಬರ ವಿತರಿಸಲಾಗುವುದು ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹದೇವಯ್ಯ ಮನವಿ ಮಾಡಿದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *