ಸಾಗರ : ಹೇಸಿಗೆ ಕೆಲಸ ಮಾಡಿ ಮಂತ್ರಿ ಸ್ಥಾನ ಕಳೆದುಕೊಂಡ ಹಾಲಪ್ಪ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ.
ಇಂದು ಸಾಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು
ನಾನು ಗಣಪತಿ ಕೆರೆಗೆ ಸೇರುವ ತ್ಯಾಜ್ಯ ನೀರನ್ನು ತಡೆಯಿರಿ ಎಂದು ಪ್ರತಿಭಟಿಸಿದರೆ ಅದನ್ನು ಸರಿ ಮಾಡುವ ಬದಲು ಆಡಳಿತ ಮಾಡುವ ಪಕ್ಷ ನನ್ನ ವಿರುದ್ದವೇ ಪ್ರತಿಭಟನೆ ಮಾಡಿರುವುದು ಶಾಸಕ ಹಾಲಪ್ಪ ಮೂರ್ಖತನ.
ಕೆರೆಗೆ ಅನೈರ್ಮಲ್ಯದ ನೀರು ಬೇಡ ಎಂದಿದ್ದೇನೆಯೇ ಹೊರತು ಕೆರೆಹಬ್ಬ ಬೇಡ, ಸಾಗರಾರತಿ ಬೇಡವೆಂದು ನಾನು ಹೇಳಲೇ ಇಲ್ಲ
ಕೆರೆಯ ಅಭಿವೃದ್ಧಿಗೆ ಮೊದಲು ಹಣ ತಂದಿದ್ದೇ ಕಾಗೋಡು ತಿಮ್ಮಪ್ಪನವರು ಈಗ ಅಭಿವೃದ್ಧಿ ಹೆಸರಲ್ಲಿ ಕೆರೆಯನ್ನು ಸ್ವಿಮ್ಮಿಂಗ್’ಪೂಲ್ ಮಾಡಲು ಹೊರಟ ಶಾಸಕ ಹಾಲಪ್ಪ.
ಹಾಲಪ್ಪ ನನ್ನನ್ನು ರೆಸಾರ್ಟ್ ರಾಜಕಾರಣ ಮಾಡುವವರು ಎಂದಿದ್ದಾರೆ. ಹಾಲಪ್ಪ ಎಲ್ಲಿ ಹೋಗಿದ್ದರು ಅನ್ನುವುದು ಹಾಲಪ್ಪನೇ ಮರೆತಿರಬೇಕು.
ಕಾಂಗ್ರೇಸ್ ಪಕ್ಷ ಟಿಕೇಟ್ ಕೊಟ್ಟರೆ ಕಾಗೋಡು ತಿಮ್ಮಪ್ಪನವರಿಗೆ, ಇಲ್ಲವೇ ನನಗೆ, ಅದು ಬಿಟ್ಟರೆ ರಾಜನಂದಿನಿಗೆ ನೀಡಬಹುದು ಆದರೆ ನಾವೇಲ್ಲ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಬಿಜೆಪಿಯಲ್ಲಿ ಹಾಲಪ್ಪ ಟಿಕೇಟ್ ಸಿಗದೇ ಹೋದರೆ ಏನು ಮಾಡುತ್ತಾರೆ.
ಅದು ಇದು ಎನ್ನುವ ಶಾಸಕರ ನನ್ನನ್ನು ಹೊಲಸು ಎನ್ನುವ ಬದಲು ಈ ಹಿಂದೆ ಮಂತ್ರಿಗಿರಿ ಕಳೆದುಕೊಂಡದ್ದು ಯಾವ ಹೊಲಸಿನಿಂದ ಎಂದು ಸಾರ್ವಜನಿಕವಾಗಿ ಹೇಳಲಿ .ನಿನ್ನೆ ದಿನ ಹಾಲಪ್ಪನವರ ಪರವಾದ ಪ್ರತಿಭಟನೆ ಬಿಜೆಪಿ ಮಾಡಿದೆ. ನಾನು ವಿರೋಧ ಪಕ್ಷದವನು ಗಣಪತಿಕೆರೆ ಕಾಮಗಾರಿ ಬಗ್ಗೆ ವಿರೋದಿಸಿದ್ದೇನೆ. ಅವರು ನನ್ನ ವಿರುದ್ದ ಪ್ರತಿಭಟನೆ ಮಾಡುವ ಪರಿಸ್ತೀತಿ ಸಾಗರದಲ್ಲಿ ತಂದುಕೊಂಡಿದ್ದಾರೆ.
ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡುವ ಹಾಲಪ್ಪ, ಈ ಹಿಂದೆ ಕಾಗೋಡರು ಮಾಡಿದ ಒಳಾಂಗಣ ಕ್ರೀಡಾಂಗಣ, ಈಜುಕೊಳ, ಕಾಗೋಡರು ತಂದ ಅನುದಾನದ ಕಾಮಗಾರಿಗಳನ್ನೇ ಮುಂದುವರೆಸಿದ್ದಾರೆ.
ಹಾಲಪ್ಪನವರಿಗೆ ಸರಕಾರದ ಬಜೆಟ್ ಹೆಚ್ಚಿರುವ ಕಾರಣ ಅನುದಾನ ತರಬಹುದು. ನಾನು ಶಾಸಕನಾಗಿದ್ದಾಗ ಬಜೆಟ್ ಮಂಡನೆಯೇ ಕಡಿಮೆಯಿತ್ತು.
ಮಾರಿಕಾಂಬ ದೇವಸ್ಥಾನದಲ್ಲಿ ಶಾಸಕ ಹಾಲಪ್ಪ ಹಸ್ತಕ್ಷೇಪ.
ಸಿಗಂದೂರು ದೇವಸ್ಥಾನದಲ್ಲಿ ಶಾಸಕ ಹಾಲಪ್ಪ ಹಸ್ತಕ್ಷೇಪ.
ಎಂಡಿಎಫ್ ಗಲಾಟೆಯಲ್ಲಿ ಬ್ರಾಹ್ಮಣ ಮತ್ತು ಲಿಂಗಾಯಿತರನ್ನು ಇದೇ ಹಾಲಪ್ಪ ಹೊಡೆಸಿದ್ದಾನೆ.
ರೌಡಿಶೀಟರ್ ಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಪ್ರತಿಭಟನೆ.
ನಿನ್ನೆ ನನ್ನ ವಿರುದ್ದ ಪ್ರತಿಭಟನೆಯಲ್ಲಿ ರೌಡಿಶೀಟರ್’ಗಳನ್ನು ಹಾಲಪ್ಪ ಪಕ್ಕದಲ್ಲಿಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವರದಿ: ಸಿಂಚನ ಕೆ
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.