ಬೆಳಗಾವಿ: ಹಿಂದೂ ಕುರಿತು ಸತೀಶ್ ಜಾರಕಿಹೊಳಿ ಅವಹೇಳನ ಮಾತು ಪ್ರಕರಣ. ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ.
ಸಿಎಂ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ.ಇಡೀ ಘಟನೆಯ ಕುರಿತು ತನಿಖೆ ಆಗ್ರಹಿಸಿದ ಸತೀಶ್ ಜಾರಕಿಹೊಳಿ.
ಹಿಂದೂ ಪದ ಪರ್ಷಿಯನ್ ನಿಂದ ಬಂದಿದೆ, ಹೇಗೆ ಬಂತು ಹಾಗೂ ಹಿಂದೂ ಪದದ ಬಗ್ಗೆ ಕೆಲ ಲೇಖನಗಳು, ವಿಕಿಪೀಡಿಯದಲ್ಲಿ ಕೆಟ್ಟದಾಗಿ ಅರ್ಥವಿದೆ, ಈ ಕುರಿತು ಚರ್ಚೆಯಾಗಬೇಕಿದೆ ಎಂದು ಹೇಳಿದ್ದೆ
ಆದ್ರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ತೇಜೋವಧೆ ಮಾಡಲು ಹೊರಟಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆದಿದೆ. ನೈಜ ಸ್ಥಿತಿ ಬಿಟ್ಟು, ಆವಾಂತರ ಸೃಷ್ಠಿಸಿದವರ ವಿರುದ್ದ ತನಿಖೆ ನಡೆಬೇಕೆಂದ ಸತೀಶ್.
ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಯಾಗಬಾರದು ಎಂಬ ಉದ್ದೇಶದಿಂದ ನನ್ನ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸುತ್ತೇನೆಂದ ಸತೀಶ್ ಜಾರಕಿಹೊಳಿ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.