ಬೆಳಗಾವಿ: ಚರ್ಚೆಯಾಗಲೀ ಸಾಬೀತಾದರೇ ಕ್ಷಮೆಯಾಚನೆಯಲ್ಲ ರಾಜೀನಾಮೆಗೂ ಸಿದ್ದ:ಸತೀಶ್ ಜಾರಕಿಹೊಳಿ.
ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ. ಅವರು ಬರೋದಾದ್ರೇ ಹೊರಗಡೆ ಬಂದು ಚರ್ಚೆ ಮಾಡಲಿ. ಎಲ್ಲೋ ಕುಂತು ತಮಗೆ ಬೇಕಾದ ಹಾಗೇ ಚರ್ಚೆ ಮಾಡುವುದು ಬೇಡ ಸಾಮೂಹಿಕ ಚರ್ಚೆ ಮಾಡಲಿ.
ಅವರ‌್ಯಾರೋ ನಾಲ್ಕು ಜನ ಚರ್ಚೆ ಮಾಡಿದ್ರೇ ಅಂತಿಮ ನಿರ್ಣಯ ಆಗುವುದಿಲ್ಲ. ಅದು ನನ್ನ ಭಾಷಣ ಅಲ್ಲಾ ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದಿದ್ದು ಅಲ್ಲಾ.
ಇಂತಹ ವಿಷಯದ ಮೇಲೆ ಹಿಂದೂತ್ವ ಗಟ್ಟಿ ಮಾಡಲು ಬಳಸಿಕೊಳ್ತಿದ್ದಾರೆ. ಯಡಿಯೂರಪ್ಪನವರು ಬೊಮ್ಮಾಯಿ ಅವರಿಗೆ ಹೇಳಿ ಒಂದು ತಿಂಗಳಲ್ಲಿ ತನಿಖೆ ಮಾಡಿ ವರದಿ ಕೊಡಲು ಹೇಳಿ.
ನಾನು ಕ್ಷಮೆ ಮಾತ್ರ ಅಲ್ಲಾ ರಾಜೀನಾಮೆ ಕೊಡಲು ಸಿದ್ದ ಎಂದ ಸತೀಶ್ ಜಾರಕಿಹೊಳಿ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.