ಬೆಳಗಾವಿ: ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗ್ತಾರೆ:ಸಿಎಂ ಇಬ್ರಾಹಿಂ ವಿಶ್ವಾಸದ ನುಡಿ.
ಚಿಕ್ಕೋಡಿ, ನಿಪ್ಪಾಣಿಯಲ್ಲಿ ಇವತ್ತು ಮಾತು ನಾಳೆ ಕಾರ್ಯಕ್ರಮದಲ್ಲಿ ಭಾಗಿ. ಮರಾಠ ಮತ್ತು ಲಿಂಗಾಯತ ಹಿಂದುಳಿದ ವರ್ಗದ ಜನರ ಕರೆಗೆ ಬಂದಿದ್ದೇನೆ. ಜಿಲ್ಲೆಯ 18 ಕ್ಷೇತ್ರದ ಜನರ ಆಶೀರ್ವಾದ ಪಡೆಯಲು ಬಂದಿದ್ದೇನೆ.
ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಲ್ಲ ರಾಜ್ಯ ಪಕ್ಷ ನಿಮ್ಮೆಲ್ಲರ ಆಶೀರ್ವಾದಬೇಕು. ನಮ್ಮ ಪಕ್ಷ ಹಿಂದಿನ ಪರಂಪರೆಯನ್ನು ರಾಜ್ಯದಲ್ಲಿ ತಂದಿದ್ದೇವೆ.
2023 ಕ್ಕೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಜೆಡಿಎಸ್ ಪಂಚಯಾತ್ರೆ ಎಂಬ 5 ಕಾರ್ಯಕ್ರಮ ತಯಾರಿ ಮಾಡುತ್ತಿದ್ದೆವೆ.
ಕೆಜಿಯಿಂದ ಪಿಜಿವರೆಗೆ ಪ್ರೀ ಶಿಕ್ಷಣ, ಪ್ರತಿ ಗ್ರಾಮ ಪಂ. ಯಲ್ಲಿ ಎಲ್ಲ ಖಾಯಿಲೆಗಳಿಗೆ ಉಚಿತ ಆರೋಗ್ಯ. ಪ್ರತಿಯೊಂದು ಕುಟುಂಬಕ್ಕೆ ವಾಸದ ಮನೆ.
ರಾಜ್ಯದಲ್ಲಿ ನೀರಾವರಿ ಯೋಜನೆ, ಕುಡಿಯಲು ನೀರು ಹೊಲಕ್ಕೆ ನೀರು. ಮಹಿಳಾ ಸಬಲೀಕರಕ್ಕಾಗಿ ಯೋಜನೆ.
ಬಿಜೆಪಿ ಕಾಂಗ್ರೆಸ್ 40-20 ಪರ್ಸೆಂಟ್ ತಿಕ್ಕಾಟದಲ್ಲಿ ಇದ್ದಾರೆ. ಅಗತ್ಯ ವಸ್ತುಗಳ ಬೆಲೆಏರಿಕೆ ಆಗಿದೆ ಅದರ ಬಗ್ಗೆ ಚಿಂತನೆ ಇಲ್ಲ.
ಕೊಟ್ಟ 5 ವರ್ಷಗಳಲ್ಲಿ ಕೊಟ್ಟ ಮಾತನ್ನು ನಡೆಸುತ್ತಿದ್ದಾರೆ. ಮತ್ತೊಮ್ಮೆ ಮತ ಕೇಳಲು ಬರಲ್ಲ ಎಂದ್ ಸಿಎಂ ಇಬ್ರಾಹಿಂ. ಭೀಕ್ಷೆಯ ಜೋಳಿಗೆ ತೆಗೆದುಕೊಂಡು ರಾಜ್ಯದ ಜನರಲ್ಲಿ ಬೇಡುತ್ತಿದ್ದೇನೆ.
ಕುಮಾರಸ್ವಾಮಿ ಸಿಎಂ ಆಗಬೇಕು ಅವರ ಮನೆಗೆ ಹೊಡವರರುಅವರನ್ನು ಸಿಎಂ ಸ್ಥಾನದಿಂದ ಇಳಿಸಿದವರು ಯಾರು ?ಜ್ಯಾತ್ಯಾತೀತ ಎಂದು ಜಾತಿ ತಾರತಮ್ಯ ಏಕೆ?
ಲಿಂಗಾಯತ ಕತ್ತಿ, ಕೋರೆ, ಹೋದಾಗಲೇ ಬಿಜೆಪಿ ಗೆದಿದ್ದು. ಪಠ್ಯ ಪುಸ್ತಕ ತಪ್ಪುಗಳ ಬಗ್ಗೆ ಎಚ್ಚರ ಕೊಟ್ಟಿದ್ದು ನಾವೇ.
ಡಿಕೆಶಿಗೆ ಸಿದ್ದರಾಮಯ್ಯಗೆ ಮೊದಲು ಜೋಡೋ ನಂತರ ಚೋಡೋ
ಜೆಡಿಎಸ್ ಪಕ್ಷದವರು ಬಿಜೆಪಿಗೆ ಬರುತ್ತಿದ್ದಾರೆ ಎಂಬ ಪ್ರಶ್ನೆ? ಬಿಜೆಪಿಯವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿಲ್ಲ
ಅದಕ್ಕೆ ನಾವು ಹುಟ್ಟಿಸಿದ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರೆ.
ಅವರು 50 ಆಕಳನ್ನು ಕಟ್ಟಿದ್ರೆ ನಾವು ಒಂದೇ ಹೋರಿ ಕಟ್ಟುತ್ತೇವೆ. ಇಬ್ರಾಹಿಂ ಪಕ್ಷದಿಂದ ಪಕ್ಷಕ್ಕೆ ಹಾರುವ ಊಸರವಳ್ಳಿ ಕಾಂಗ್ರೆಸ್ ಹೇಳಿಕೆ. ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ಗೆಲ್ಲಿಸಿದ್ದೆ ನಾನು.
ಸಿದ್ಧರಾಮಯ್ಯನನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಹೋಗಿದ್ದೆ ಆಗಲಿಲ್ಲ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.