“ಚಂಡಮಾರುತ ಎಫೆಕ್ಟ್: ಭಾರಿ ಮಳೆಯ ಸಾಧ್ಯತೆ”

ಬಂಗಾಳಕೊಲ್ಲಿ: ಚಂಡಮಾರುತ ಎಫೆಕ್ಟ್: ಭಾರಿ ಮಳೆಯ ಸಾಧ್ಯತೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ತೆಲುಗು ರಾಜ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಹವಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಚಂಡಮಾರುತದ ಗಾಳಿ ಮತ್ತು ಮಳೆಯ ತೀವ್ರತೆಯ ಬಗ್ಗೆ ಸ್ಪಷ್ಟತೆ ಪಡೆಯಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಯಾವ ದಿಕ್ಕಿನಲಿ ಸಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಎಂದು ಎಪಿ ಮತ್ತು ಒಡಿಶಾ ನಡುವೆ ಹಾದು ಹೋಗುತ್ತದೆ, ಎಂದು ಆರಂಭದಲ್ಲಿ ಭಾವಿಸಲಾಗಿದ್ದರೂ, ಅದು ಒಡಿಶಾ-ಪಶ್ಚಿಮದಲ್ಲಿ ಬಂಗಾಳದ ಕಡೆಗೆ ತನ್ನ ದಿಕ್ಕನ್ನು ಬದಲಾಯಿಸುವ ನಿರೀಕ್ಷೆಯಿದೆ.

ಎಪಿ ಮತ್ತು ಒಡಿಶಾ ನಡುವೆ ಚಂಡಮಾರುತದ ವಾತಾವರಣವಿದ್ದರೆ, ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದೇ 23 ರಿಂದ 26 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 46ರಿಂದ 65 ಕಿ.ಮೀ . ವೇಗದಲ್ಲಿ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *