
ಬಡವರ ಭಾಗ್ಯ ಸಿದ್ದರಾಮಯ್ಯ.
ನಾನು ನಡೆದುಕೊಂಡು ಹೋಗಿ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ.ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆ ನೀಡುವುದಾಗಿ ಭರವಸೆ ನೀಡಿದ್ದರು.ಅಂತೆಯೇ ಇಂದು ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದುಕೊಂಡಿದ್ದಾರೆ.ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ.ನಡೆದುಕೊಂಡೆ ಮನೆಕೆಲಸ ಮಾಡಿ ನಡೆದುಕೊಂಡೆ ಬರುತ್ತಿದ್ದ ನನಗೆ ಈಗ ನೆಮ್ಮದಿಯಾಗಿ ಯಾವುದೇ ಆಯಾಸ ಇಲ್ಲದೇ ಉಚಿತವಾಗಿ ಬಸ್ ನಲ್ಲಿ ತೆರಳಲೂ ಸಿದ್ದರಾಮಯ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ನಾನು ಸಿದ್ದರಾಮಯ್ಯರವರಿಗೆ ಧನ್ಯವಾದ ತಿಳಿಸುತ್ತೇನೆ.
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಆದನ್ನ ಕೊಡ್ತೀವಿ ಇದನ್ನ ಕೊಡ್ತೀವಿ ಅಂತ ಬರೀ ಸುಳ್ಳು ಭರವಸೆ ಕೊಟ್ಟವರೇ ಜಾಸ್ತಿ.ಅಧಿಕಾರಕ್ಕೆ ಬಂದನಂತರ ನಾವ್ಯಾರೋ ನೀವ್ಯಾರೋ ಅಂದವರೇ ಹೆಚ್ಚು.ಆದರೇ ಈಗ ಬಂದ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳಿದ್ರೂ ಅವರ ಭರವಸೆ ಮಾತಿನಂತೆ ನಾವು ಓಟ್ ಹಾಕಿದ್ವೀ ಈಗ ರಾಜ್ಯದಲ್ಲಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಈ ಹಿಂದೆ ಇದ್ದ ಸರ್ಕಾರ ಪ್ರತಿ ಒಬ್ಬರ ಖಾತೆಗೂ 15 ಲಕ್ಷ ಕೊಡುವುದಾಗಿ ಹೇಳಿ ಖಾತೆಗೆ ಹಣ ಹಾಕದೇ ಮತದಾರರಿಗೆ ಮೋಸ ಮಾಡಿದರು ಈಗ ಅಧಿಕಾರ ಕಳೆದುಕೊಂಡಿದ್ದಾರೆ.ಜನರೇ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಐದು ವರ್ಷ ಇರಲಿ ಬಡ ಜನರಿಗೆ ಅನುಕೂಲವಾಗಲಿದೆ ಎಂದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.