ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ NAAC ವತಿಯಿಂದ A+ ಮಾನ್ಯತೆ.

ನಂದಿನಿ ಮೈಸೂರು

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ NAAC ವತಿಯಿಂದ A+ ಮಾನ್ಯತೆ ದೊರೆತಿದೆ ಎಂದು ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್‌ ಕಾಲೇಜಿಗೆ 2022-23 ನೇ ಸಾಲಿನಿಂದ 2025-27ನೇ ಸಾಲಿನವರೆಗೆ 5 ವರ್ಷಗಳ ಅವಧಿಗೆ NAAC ವತಿಯಿಂದ A+ ಮಾನ್ಯತೆ ದೊರೆತಿದೆ. ಮೈಸೂರಿನ ಇಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಮೊದಲ ಆವೃತ್ತಿಯಲ್ಲೇ ಎ ಮಾನ್ಯತೆ ಪಡೆದ ಮೊದಲ ಇಂಜನಿಯರಿಂಗ್ ಕಾಲೇಜು ಹಾಗೂ ಬಿ.ಟಿ.ಯು ಮೈಸೂರು ವಲಯದಲ್ಲಿ 2ನೇಯ ಕಾಲೇಜಾಗಿದೆ. ರಾಜ್ಯದಲ್ಲೇ A+ ಮಾನ್ಯತೆ ಪಡೆದ 7ನೇಯ ಕಾಲೇಜಾಗಿದ್ದ, ಈ 7 ಕಾಲೇಜುಗಳ ಪೈಕಿ A+ ಮಾನ್ಯತೆ ಪಡೆದ ಅತ್ಯಂತ ಕಿರಿಯ ಕಾಲೇಜು’ ಎಂಬ ಪ್ರಶಂಶೆಗೆ ಪಾತ್ರವಾಗಿದೆ. ಅಲ್ಲದೆ ಇಡೀ ದೇಶದಲ್ಲಿ ಮೊದಲನೆ ಆವೃತ್ತಿಯಲ್ಲ ಈ ಸಾಧನೆ ಮಾಡಿದ 47ನೇ ಇಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.ಆನ್ ಲೈನ್ ಮೂಲಕ ಅಪ್ಲೈ ಮಾಡಲಾಗಿದ್ದು ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಪರಿಶೀಲಿಸಿ ಪರಿಗಣಿಸಿ 1000 ಅಂಕಗಳಿಗೆ 700 ಅಂಕ ಪಡೆದಿದೆ.ಈ
ಮಾನ್ಯತೆ ಪಾರದರ್ಶಕತೆಯಿಂದ ಕೂಡಿದೆ ಎಂದರು.

Leave a Reply

Your email address will not be published. Required fields are marked *