ಈದ್ ಮಿಲಾದ್ ಅಂಗವಾಗಿ ಹಿಂದೂ ಮುಸಲ್ಮಾನ್ ಜತೆಗೂಡಿ ಸಸಿ ನೆಡುವ ಮೂಲಕ ಸಹಬಾಳ್ವೆ ಸಂದೇಶ ನೀಡಿದರು.
ಅಹಿಂದ ಸಂಘಟನೆ ಹಾಗೂ ಹೊಯ್ಸಳ ಟ್ರಸ್ಟ್ ವತಿಯಿಂದ ಈದ್ ಮಿಲಾದ್ ಅಂಗವಾಗಿ ಹಿಂದೂ ಮುಸಲ್ಮಾನ್ ಜತೆಗೂಡಿ ಸಸಿ ನೆಡುವ ಮೂಲಕ ಸಹಬಾಳ್ವೆ ಕಾರ್ಯಕ್ರಮ ವನ್ನು ಜೆ ಎಲ್ ಬಿ ರಸ್ತೆಯಲ್ಲಿರುವ ಕಂಸಾಳೆ ಮಾದೇವಯ್ಯ ವೃತ್ತದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಮಹಾಮಾರಿ ಕೂರೂನಾ ಸಂದರ್ಭದಲ್ಲಿ ದೇಶವೇ ಲಾಕ್ ಡೌನ್ ಆದಾಗ ನಿರ್ಗತಿಕರಿಗೆ ಹಿಂದು ಮತ್ತು ಮುಸಲ್ಮಾನ್ ಬಾಂಧವರು ಜತೆಗೂಡಿ ಅಸಹಾಯಕರಿಗೆ ಆಹಾರ ಮತ್ತು ದಿನನಿತ್ಯದ ಪದಾರ್ಥಗಳನ್ನು ನೀಡುವ ಮೂಲಕ ಸಹಬಾಳ್ವೆಯಿಂದ ಸಹಾಯ ಹಸ್ತ ನೀಡಿರುವುದು ಸಹ ನಾವು ನೋಡಿದ್ದೇವೆ, ಈದ್-ಮಿಲಾದ ಹಬ್ಬ ನಮ್ಮ ಮುಸಲ್ಮಾನ್ ಸಮಾಜಕ್ಕೆ ಅಷ್ಟೇ ಮೀಸಲು ಇಲ್ಲ ಈ ಹಬ್ಬವು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವುದರಿಂದ ಎಲ್ಲರೂ ಸಹೋದರತೆಯಿಂದ ಆಚರಣೆ ಮಾಡುತ್ತಿದ್ದು.
‘ಸಹಬಾಳ್ವೆ ಎಲ್ಲ ಧರ್ಮಗಳ ತಿರುಳು’
ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ತಿರುಳಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ
ಮನುಕುಲದ ಉದ್ದಾರಕ್ಕಾಗಿಯೇ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಸಮಾಜವು ದಾರಿ ತಪ್ಪಿದಾಗ ಜನ್ಮ ತಾಳಿದ ಮಹಾ ಪುರುಷರು ಸರಿ ದಾರಿಗೆ ತರುವ ಯತ್ನ ನಡೆಸಿ ಬಹುತೇಕ ಯಶಸ್ವಿ ಆಗಿದ್ದಾರೆ. ಆದರೆ ಇಂದು ಅವರನ್ನು ಜಾತಿ, ಧರ್ಮಗಳೊಳಗೆ ಕಟ್ಟಿ ಹಾಕುತ್ತಿದ್ದೇವೆ’ ಎಂದು ಹೇಳಿದರು.
‘ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಸದ್ಗುಣ ಮಾತ್ರ
ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು. ಇಡೀ ಮಾನವ ಕುಲದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹ್ಮದ್ ಪೈಗಂಬರರು ಜಗತ್ತಿಗೆ ಶಾಂತಿಯ ಪಾಠ
ಬೋಧಿಸಿದರು. ಮನುಷ್ಯ ಸಂಕುಚಿತ ಭಾವನೆ ತೊರೆದು ವಿಶಾಲ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮಗೆ ಧರ್ಮ ಸಂಘರ್ಷ, ಹಿಂಸೆಗಳು ಬೇಕಾಗಿಲ್ಲ. ಪರಸ್ಪರ ಪ್ರೀತಿಯಿಂದ, ಮನುಷ್ಯತ್ವದಿಂದ ಬದುಕುವುದನ್ನು ಕಲಿಯೋಣ’ ಎಂದು ಕರೆ ನೀಡಿದರು.
‘ಧಾರ್ಮಿಕ ಉತ್ಸವಗಳು ಆಯಾ ಧರ್ಮಗಳಿಗೆ ಸೀಮಿತವಾದರೆ
ಸಮಾಜದಲ್ಲಿ ಸಾಮರಸ್ಯ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಂದೇ ಎಂಬ ಕಲ್ಪನೆ ಬೆಳೆಸಿಕೊಂಡು ಅನ್ಯೋನ್ಯವಾಗಿ ಬಾಳಿದಾಗ ಬದುಕು ಸಾರ್ಥಕವಾಗುತ್ತದೆ. ಮಹ್ಮದ್ ಪೈಗಂಬರರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಮೂಲ ಗುರಿ ಮಾನವನ ಕಲ್ಯಾಣವೇ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದ್ಯಸರಾದ ನಜರ್ಬಾದ್ ನಟರಾಜ್, ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ರಾಜೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಗೀರ್. ಫಾಝಿಲ್. ಖಾಲಿದ್.. ಯುನೆಸ್, ಅಬ್ದುಲ್, ಕಲೀಮ್ ಪಾಷಾ, ವಕೀಲರಾದ ನಾಗರಾಜ್, ಬಸವಣ್ಣ ,ಚನ್ನರಾಜ ನಾಯಕ್, ಕಾಳಪ್ಪ, ಪೂಣಚಿ,
ವರದಿ: ನಂದಿನಿ ಮೈಸೂರು