
ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಮಾದಕ ವಸ್ತು ಕಳ್ಳ ಸಾಗಣೆ ವಿರೋಧಿ ದಿನ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮನವಿ
ಮೈಸೂರು : ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ನಗರದ ಪ್ರತಿ ಕಾಲೇಜುಗಳಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಮಾದಕ ವಸ್ತು ಕಳ್ಳ ಸಾಗಣೆ ವಿರೋಧದ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಕ್ಕಳಲ್ಲಿ ಜಾಗೃತಿ ಮೂಡಲಿ ಎಂದು ಸದ್ವಿದ್ಯಾ ಕಾಲೇಜು, ಮರಿಮಲ್ಲಪ್ಪ ಕಾಲೇಜು, ಟಿಟಿಎಲ್ ಕಾಲೇಜು ,ಶಾರದಾ ವಿಲಾಸ್ ಕಾಲೇಜು, ಡಿ. ಬನುಮಯ್ಯ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳಿಗೆ ಪದಾಧಿಕಾರಿಗಳು ಭೇಟಿ ನೀಡಿ ಮಾದಕ ದ್ರವ್ಯ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿಯ ಪೋಸ್ಟರ್ ನೀಡಿ ಮನವಿ ಮಾಡಿ
ಮಾತನಾಡಿದ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ರವರು
ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆಯಿಂದ ಸಮಾಜದ ಮೇಲಾಗುವ ಹಾನಿ ಮಾರಣಾಂತಿಕವಾದುದು, ಇದರ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ ತಡೆಯುವ ಉದ್ದೇಶದಿಂದ 1989 ರಿಂದ ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಾಚರಣೆಯ ಉದ್ದೇಶ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳು, ಯುವಜನತೆ ಅರ್ಥ ಮಾಡಿಕೊಳ್ಳಬೇಕು ಮತ್ತು ಮಾದಕ ದ್ರವ್ಯ ಸೇವನೆಯಿಂದ ಎದುರಾಗುವ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಹಂತದಲ್ಲೇ ಅರಿವು ಮೂಡಿಸುವುದರಿಂದ ತಡೆಯಲು ಸಾಧ್ಯವಾಗುವುದು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಟ್ರಸ್ಟಿ ಪದಾಧಿಕಾರಿಗಳಾದ
ಅಜಯ್ ಶಾಸ್ತ್ರಿ, ರವಿಚಂದ್ರ, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್ ,ಸಚಿನ್ ನಾಯಕ್ ಹಾಗೂ ಇನ್ನಿತರರು ಹಾಜರಿದ್ದರು
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555