ಅಂದ್ರಪ್ರದೇಶ: ಮಳೆ ಹಿನ್ನಲೆ: ಆಂಧ್ರದಲ್ಲಿ ಮನೆಗಳು , ಹೆದ್ದಾರಿ ಜಲಾವೃತ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಮವೆಂಬಂತೆ ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯು ಹಲವು ಮನೆಗಳು,ಹೆದ್ದಾರಿಗಳನ್ನು ಮುಳುಗಿಸಿದೆ.
ಶ್ರೀಕಾಕುಳಂನಲ್ಲಿ ವಸತಿ ಕಾಲೊನಿಗಳು ,ಹೆದ್ದಾರಿಗಳು , ಕಾರುಗಳು ಮುಳುಗಿದ್ದು ಜನಜೀವನಸಂಪೂರ್ಣ ಅಸ್ತವ್ಯಸ್ತವಾಗಿದೆ.
ಒಡಿಶಾದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಬುಧವಾರವೂ ಭಾರೀ ಮಳೆಯಾಗಲಿದೆ,ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಬಯಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ರಾಯಗಢ, ರತ್ನಗಿರಿ ,ಮತ್ತು ಸತಾರಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ, ಎಂದು ಹೇಳಿರುವ ಹವಾಮಾನ ಇಲಾಖೆ, ಈ ಮೂರೂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ವರದಿ: ಸಿಂಚನಾ ಜಯಂತ ಬಲೇಗಾರು.
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.