ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿವೇಕ ಯಾತ್ರೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ , ಶಿಕಾರಿಪುರ ತಾಲೂಕು ,ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿವೇಕ ಯಾತ್ರೆಯ ತಾಲೂಕು ಮಟ್ಟದ ಸ್ಪರ್ಧೆಗಳು ಕುಮಧ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಯಿತು.
ಮಲೆನಾಡಿನ ಅಂಗಳದ ನೆಲೆ ಬಿಡದೆ ಭಾರತ ವರ್ಷದ ಅಂಬರವನ್ನು ಹಾಡಿಹೊಗಳುತ್ತ , ಜನಮಾನಸದ ನಾಡಿಮಿಡಿತವನ್ನು ಅವಲೋಕಿಸುತ್ತ , ಸಮಾಜದ ಅಂಕುಡೊಂಕುಗಳನ್ನು ಗುರುತಿಸಿ , ತಿದ್ದಿ , ಸಾಗುವ ದಾರಿಯಲ್ಲಿ ಬೆಳಕು ತೋರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ರವರು ನಮ್ಮ ಜಿಲ್ಲೆಯವರು ಎಂಬುದು ಹೆಗ್ಗಳಿಕೆಯ ವಿಷಯ. “ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ವಿವೇಕಾನಂದರ ಪುಸ್ತಕವನ್ನು ಇಟ್ಟು ಬಿಡಿ ಯಾವುದಾದರೂ ಸಿಡಿಲ ಮರಿ ಇಂದಲ್ಲ ನಾಳೆ ಪುಸ್ತಕಗಳ ಪ್ರಭಾವದಿಂದ ಜಗವ ಬದಲಿಸುತ್ತದೆ ಎಂದು ಹೇಳಿದ್ದರು. ಅಂದರೆ ಕುವೆಂಪು ಅವರ ಮನದಾಳದಲ್ಲಿ ವಿವೇಕಾನಂದರ ವಿಚಾರಧಾರೆಗಳಿಂದ ಭಾರತವನ್ನು ಬದಲಾಯಿಸಬಹುದು ಎಂಬ ಬಲವಾದ ವಿಶ್ವಾಸವಿತ್ತು ಎಂಬ ಕುವೆಂಪುರವರ ಮಾತುಗಳನ್ನು ನೆನೆಯುತ್ತಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ನಗರ ವಿಸ್ತಾರಕರು, ವಿವೇಕಯಾತ್ರೆಯ ಸಹಸಂಚಾಲಕಿ ಯಶಸ್ವಿನಿ ರವರು ಪ್ರಸ್ತಾವಿಕ ಭಾಷಣವನ್ನು ಮಾಡಿದರು ಹಾಗೂ ವಿವೇಕಾನಂದರಿಂದ ಪ್ರೇರೇಪಿತರಾಗಿ ಅವರ ನುಡಿಗಳನ್ನು ನೆನೆಯುತ್ತಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ।। ಜಿ ಆರ್ ಹೆಗಡೆ ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಿವೇಕಯಾತ್ರೆಯ ಅಂಗವಾಗಿ ಪ್ರಬಂಧ , ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕಾರಿಪುರ ತಾಲೂಕಿನ ವಿವಿಧ ಕಾಲೇಜುಗಳಿಂದ 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಗೆ ತೀರ್ಪುಗಾರರಾಗಿ ಪ್ರಾಧ್ಯಾಪಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರವೀಂದ್ರರವರು ,ಪ್ರಾಧ್ಯಾಪಕರಾದ ಶ್ವೇತಾರವರು ನಿರ್ವಹಿಸಿದರು . ಕಾರ್ಯಕ್ರಮವು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಜಿ ಆರ್ ಹೆಗಡೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ರಸಪ್ರಶ್ನೆಯಲ್ಲಿ ನಾಗರಾಜ್ ಮತ್ತು ಪರಮೇಶ್ ಉಪ್ಪಾರ್ ರವರು ಹಾಗೂ ಭಾಷಣ ಸ್ಪರ್ಧೆಯಲ್ಲಿ ವರ್ಷಿತ ಹಾಗೂ ಜ್ಯೋತಿಕಾ ಅವರು ರವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿವೇಕಯಾತ್ರೆಯ ಜಿಲ್ಲಾ ಮಟ್ಟದ ಸ್ಪರ್ಧೆಗಳು ಜನವರಿ 03 ರಂದು ಕುಪ್ಪಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಭಾವಿಪದ ಕಾರ್ಯಕರ್ತರಾದ ಯಶಸ್ವಿನಿ , ಲೋಹಿತ್ ,ರಂಗನಾಥ್ ,ಯುವರಾಜ್ ನಿಖಿಲ್ ,ಅರುಣ್ ಕುಮಾರ್ ,ಕೇಶವ ವಸಿಷ್ಠ ಉಪಸ್ಥಿತರಿದ್ದರು.
ವರದಿ:ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link
ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555