
ಸಾಗರ: ಕಾಂಗ್ರೆಸ್ಸ್ ನ ಕೊಂಡಿಯೊಂದು ಕಳಚಿ ಬಿದ್ದಿದೆ ಅಹಮದ್ ಅಲಿ ಖಾನ್ ನಿಧನ – ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.

ನಿಧನರಾದ ಸಾಗರದ ಕಾಂಗ್ರೆಸ್ ನ ಹಿರಿಯ ಮುತ್ಸದ್ದಿ ಅಹಮದ್ ಆಲಿಖಾನ್,ನಿವಾಸಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ…!
ಕಾಂಗ್ರೆಸ್ಸ್ ನ ಕೊಂಡಿಯೊಂದು ಕಳಚಿ ಬಿದ್ದಿದೆ.!
ಅಹಮದ್ ಅಲಿ ಖಾನ್ ಮನೆಗೆ ಜಿಲ್ಲಾ ಮಟ್ಟದ ನಾಯಕರ ದಂಡು..!

ಸಾಗರ: ಇಂದು ನಿಧಾನರಾದ ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನರಾದರ ಕಾಂಗ್ರೇಸ್ ಪಕ್ಷದ ನಿಷ್ಟಾವಂತರೂ, ಮಾರ್ಗದರ್ಶಕರು, ಆದ ಜನಾಬ್ ಅಹಮದ್ ಆಲಿಖಾನ್,ರವರ ಅಂತಿಮ ದರ್ಶನವನ್ನು ಪಡೆಯಲು ಸಾಗರ ಹೊಸನಗರ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಸಂತಾಪ ಸೂಚಿಸಿ ಆಲಿಖಾನ್ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ನಂತರ ಮಲೆನಾಡ ರಹಸ್ಯ.ಪತ್ರಿಕೆಯೊಂದಿಗೆ* ಮಾತನಾಡಿದ GKB ಆಲಿಖಾನ್ ಸಾಹೇಬರು ನಮ್ಮ ಪಕ್ಷದ ಆಲದ ಮರದಂತಿದ್ದರು. ಇಂದು ಪಕ್ಷದ ಕೊಂಡಿಯೊಂದು ಕಳಚಿ ಬಿದ್ದಿದೆ.ಶ್ರೀಯುತರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ,ಸರ್ವ ಧರ್ಮ ಸಹಿಷ್ಣುಯಾಗಿದ್ದರು. ಸಾಗರ ಪುರಸಭೆಯಲ್ಲಿ ಐದು ಬಾರಿ ಗೆದ್ದು.ಎರೆಡು ಬಾರಿ ಅಧ್ಯಕ್ಷರೂ ಕೂಡ ಆಗಿದ್ದರು.ಇಂದು ಇವರ ನಿಧನದಿಂದ ನಮಗಿಂದು ತುಂಬಲಾರದ ನಷ್ಟ ಅನುಭವಿಸುವಂತಾಗಿದೆ.ಮೃತರಿಗೆ ಸ್ವರ್ಗ ಲಭಿಸುವಂತಾಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿನೀಡಲಿ ಎಂದರು.
ಅಹಮದ್ ಅಲಿ ಖಾನ್ ಮನೆಗೆ ಜಿಲ್ಲಾ ಮಟ್ಟದ ನಾಯಕರ ದಂಡು..!
ಇಂದು ದೈವಾಧಿನರಾದ ಜನಾಬ್ ಅಹಮದ್ ಆಲಿಖಾನ್,ನಿವಾಸಕ್ಕೆ ಬೆಳಗ್ಗೆಯಿಂದಲೇ ಶಿವಮೊಗ್ಗ ಜಿಲ್ಲಾ ಮಟ್ಟದ ನಾಯಕರಾದ ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ. ಕಲಗೊಡು ರತ್ನಾಕರ.ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನಕುಮಾರ್. ಮಲ್ಲಿಕಾರ್ಜುನ ಹಕ್ರೆ. ಸಾಗರ ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ.ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸದ್ದಾಮ್.ಮೊದಲಾದವರು. ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು.

ವರದಿ: ಸಿಸಿಲ್ ಸೋಮನ್

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.