ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ..? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ..?

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ..? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ..? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್, ಈಗ ಯಾವ ಕೆಲಸ ಬೇಕಾದರೂ ಮುಖ್ಯವಾಗಿ ಬೇಕಾಗಿರುವ ನಂಬರ್. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಹಿಡಿದು ಆರ್ಥಿಕ ವಹಿವಾಟುಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಅಲ್ಲದೆ ಈಗ ಗುರುತಿನ ಚೀಟಿ ಎಂದರೆ ಆಧಾರ ಕಾರ್ಡ್ ಮಾತ್ರ ಎಂಬಂತಾಗಿದೆ. ಯಾವ ಕೆಲಸದಲ್ಲಿಯಾದರೂ ನಮಗೆ ಉಪಯುಕ್ತವಾದ ಆಧಾರ ಕಾರ್ಡ್ ಮಾತ್ರ. ಹಾಗೆ ಮನುಷ್ಯನ ಜೀವನದಲ್ಲಿ ಆಧಾರ ಕಾರ್ಡ್ ಒಂದು ಪ್ರಮುಖವಾಗಿ ಬದಲಾಗಿದೆ. ಇಂತಹ ಪ್ರಮುಖ ಆಧಾರ್ ಕಾರ್ಡ್ (Aadhaar Card Download) ಕಳೆದುಕೊಂಡರೆ, ಎಲ್ಲೋ ಇಟ್ಟು ಮರೆತು ಬಿಟ್ಟರೆ, ತುರ್ತು ಸಮಯದಲ್ಲಿ ಅದನ್ನು ಹುಡುಕುವುದು ತುಂಬಾ ತೊಂದರೆಯಾಗುತ್ತದೆ. ಇನ್ನು ಅವರಿಗೆ ಯಾವುದೇ ಸರ್ಕಾರಿ ಯೋಜನೆ ಸೌಲಭ್ಯ ಸಿಗುವುದಿಲ್ಲ ಎಂಬ ಆತಂಕ ಶುರುವಾಗುತ್ತದೆ. ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಈ ಸಮಸ್ಯೆಗೆ ಒಂದೇ ಪರಿಹಾರ ಮಾರ್ಗವಾಗಿದೆ. ಅದೇನೋ ತಿಳಿಯೋಣ. ಆನ್‌ಲೈನ್ ಮೂಲಕ ಸಾಮಾನ್ಯವಾಗಿ ಆಧಾರ್ ಕಾರ್ಡ್ (ಇ-ಆಧಾರ್) ಸಂಖ್ಯೆ ಅಥವಾ ಎನ್‌ರೋಲ್‌ಮೆಂಟ್ ಐಡಿ ಸಹಾಯದೊಂದಿಗೆ ಇ-ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಒಂದು ವೇಳೆ ನಿಮ್ಮ ಬಳಿ ಈ ಎರಡು ನಂಬರ್ ಗಳು ಇಲ್ಲದಿದ್ದರೆ ಪರಿಸ್ಥಿತಿ ಏನು? ಇಂತಹ ಸಮಸ್ಯೆಗೆ ಪರಿಹಾರವಾಗಿ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಮತ್ತೊಂದು ಮಾರ್ಗವನ್ನು ಪರಿಚಯಿಸಿದೆ. ಆಧಾರ್ ಸಂಖ್ಯೆ, ಎನ್‌ರೋಲ್‌ಮೆಂಟ್ ಸಂಖ್ಯೆ ಇಲ್ಲದಿದ್ದರೂ ಕೂಡ ಡೌನ್‌ಲೋಡ್ ಮಾಡಬಹುದು.
ಮೊದಲು ಎನ್ರೋಲ್ಮೆಂಟ್ ಐಡಿ ತಿಳಿಯಿರಿ. ಮೊದಲು ಯೂಐಡಿಐಐ ಅಧಿಕೃತ ವೆಬ್‌ಸೈಟ್‌ಗೆ (https://uidai.gov.in) ಲಾಗಿನ್ ಆಗಬೇಕು. ಆ ನಂತರ ಗೆಟ್ ಆಧಾರ ಆಯ್ಕೆಯನ್ನು ಆರಿಸಿ. ಅದರ ನಂತರ ಬರುವ ಎನ್‌ರೋಲ್‌ಮೆಂಟ್ ಐಡಿ ರಿಟ್ರೈವ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಕೇಳಿದ ವಿಷಯಗಳನ್ನು ಒದಗಿಸಿ ಗೆಟ್ ಓಟಿಪಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ಅದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಎನ್‌ರೋಲ್‌ಮೆಂಟ್ ಐಡಿ ನಂಬರ್ ಕಂಪ್ಯೂಟರ್ ಸ್ಕಿನ್ ಪೈ ಕಾಣಿಸಿಕೊಳ್ಳುತ್ತದೆ. ಎನ್‌ರೋಲ್‌ಮೆಂಟ್ ಐಡಿಯಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ. ಈಗ ನಿಮ್ಮ ಬಳಿ ಆಧಾರ್ ಕಾರ್ಡ್ ಎನ್‌ರೋಲ್‌ಮೆಂಟ್ ಐಡಿ ಇರುವ ಕಾರಣ ಸುಲಭವಾಗಿ ಇ-ಆಧಾರ್ ಡೌನ್‌ಲೋಡ್ ಮಾಡಬಹುದು. ಯೂಐಡಿಏಐ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಇ-ಆಧಾರ್ ಆಯ್ಕೆ ಆ ನಂತರ ಎನ್ರೋಲ್‌ಮೆಂಟ್ ಐಡಿಯನ್ನು ನಮೂದಿಸಬೇಕು. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಗೆಟ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಫೋನ್‌ಗೆ ಬಂದ ಓಟಿಪಿ ಸಂಖ್ಯೆ (OTP ಸಂಖ್ಯೆ) ನಮೂದಿಸಿ ನಿಮ್ಮ ಆಧಾರ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

Leave a Reply

Your email address will not be published. Required fields are marked *