ಕಂಗುವ ಎಂಬ ಹೊಸ ಲೋಕ
ದೇವಾಸುರರ ಯುದ್ಧದ ಮಾದರಿಯಲ್ಲಿ ತುಣುಕೊಂದಿದಾಗಿದ್ದು ದುಷ್ಟರ ವಿರುದ್ಧ ಬೆಂಕಿ ಸುರಿಯುವ “ಕಂಗ” ಅನ್ನೋ ವೀರನ ಪಾತ್ರದಲ್ಲಿ ನಟ ಸೂರ್ಯ ಕಂಡಿದ್ದಾರೆ.ಎರಡು ನಿಮಿಷದ ಈ ತುಣುಕಿನಲ್ಲಿ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಚಮತ್ಕಾರ ಕಾಣಬಹುದು ಜೊತೆಗೆ ಸಿನಿಮಾದ ವೈಭವತೆಯನ್ನು ಕಾಣಬಹುದು. ಏಕಕಾಲದಲ್ಲಿ 10 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಬಹುಶಃ ಮೊದಲನೇ ಸಿನಿಮಾ ಇದಾಗಿದ್ದು ಹೊಸ ದಾಖಲೆ ಬರೆಯಲು ಸಜ್ಜಾಗಿದೆ.. ಸಿನಿಮಾದಲ್ಲಿ ಸೂರ್ಯ ಅವರ ಒಟ್ಟಿಗೆ ಮೊದಲ ಬಾರಿಗೆ ಡಿಷಾ ಪತಾನಿ ಹಾಗೂ ಮೃಣಾಲ್ ಠಾಕೂರ್ ದಿಶಾಪಥಾನಿಯವರಿಗೆ ಇದು ಮೊದಲ ಸೌತ್ ಇಂಡಿಯನ್ ಸಿನಿಮಾ ಆಗಲಿದೆ.
ಸ್ಟುಡಿಯೋ ಗ್ರೀನ್ ಖ್ಯಾತಿಯ ಕೆ ಇ ಜ್ಞಾನವೆಲ್ ರಾಜ ಸಿನಿಮಾಗೆ ಬಂಡವಾಳ ಹೂಡಿದ್ದು ಅದ್ದೂರಿ ಸಿನಿಮಾಗಳಿಗೆ ಮತ್ತೊಂದು ಹೆಸರಾಗಿದೆ ಇವರ ಸಂಸ್ಥೆ. ಮೆಡಿಕಲ್ ಅಥವಾ ಮೆಡಿಸನ್ ಸಂಬಂಧಿಸಿದಂತಹ ಕಥೆ ಸಿನಿಮಾದಾಗಿರುತ್ತದೆ. 2024ರಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದ್ದು ಈಗಾಗಲೇ ಸಿನಿಮಾ ಶೂಟಿಂಗ್ ಬಹುತೇಕ ಭಾಗ ಮುಗಿದಿದೆ ಜೊತೆಗೆಯೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಸಮಕಾಲನವಾಗಿ ನಡಿತಿದೆ ಎಂಬ ಮಾಹಿತಿ ಹೊರಬಂದಿದೆ.
ಜೈ ಭೀಮ್ ಮತ್ತೆ ಸೂರಾರೈ ಪೋಟ್ರು ಸಿನಿಮಾಗಳ ಮುಖಾಂತರ ತನ್ನ ಅದ್ಭುತ ಅಭಿನಯಕ್ಕೆ ಹೆಸರುವಾಸಿಯಾಗಿರುವಂತಹನಟ ಸೂರ್ಯ ಅವರಿಗೆ ಕಂಗುವ ಕೂಡ ಅದೇ ರೀತಿಯಾದ ಒಳ್ಳೆ ಹೆಸರು ತಂದು ಕೊಡಲಿದೆ.
ವರದಿ: P. ಘನಶ್ಯಾಮ್ – ಬೆಂಗಳೂರು
ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವಿವರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400
Website :www.shivamotors.net