ಕಳ್ಳತನವಾಗಿದ್ದ ಬೋರ್‌ವೆಲ್ ಕೇಸಿಂಗ್‌ ಪೈಪ್‌ಗಳನ್ನು ಪತ್ತೆ ಹಚ್ಚಿದ ಸಾಗರ ಗ್ರಾಮಾಂತರ ಪೊಲೀಸ್ ರು

ಸಾಗರ: ಕಳ್ಳತನವಾಗಿದ್ದ ಬೋರ್‌ವೆಲ್ ಕೇಸಿಂಗ್‌ ಪೈಪ್‌ಗಳನ್ನು ಪತ್ತೆ ಹಚ್ಚಿದ ಸಾಗರ ಗ್ರಾಮಾಂತರ ಪೊಲೀಸ್ ರು.

2,00,000/- ರೂ ಬೆಲೆಯ ಬೋರ್‌ವೆಲ್ ಕೇಸಿಂಗ್ ಪೈಪ್‌ ಹಾಗೂ 10.00.000/- ರೂ ಬೆಲೆಯ ಟಿಪ್ಪರ್ ಲಾರಿ ವಶ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಬಾಳು ಗ್ರಾಮದ ಮೋರ್‌ವೆಲ್ ಕಂಟ್ರಾಕ್ಟರ್ ಲೋಕನಾಥ ಎಂಬುವವರು ತಮ್ಮ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್‌ವಲ್ ಗೆ ಅಳವಡಿಸುವ ಕೇಸಿಂಗ್‌ ಪೈಪ್‌ಗಳು ಕಳ್ಳತನ ವಾಗಿದ್ಯು ಈ ಬಗ್ಗೆ ಲೋಕನಾಥ್ ರವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು.

ಕಳ್ಳತನದ ಜಾಡು ಹಿಡಿಯಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಾದ ಮಿಥುನ್ ಕುಮಾರ್,IPS ಮತ್ತು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ರವರ ಮಾರ್ಗದರ್ಶದಲ್ಲಿ, ಸಾಗರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ರೋಹನ್‌ ಜಗದೀಶ್ IPS ರವರ ಸಾರಥ್ಯದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಹಾಗೂ ಪಿಎಸ್‌ಐ ನಾರಾಯಣ ಮಧುಗಿರಿ, ಕಾರ್ಗಲ್ ಪೊಲೀಸ್ ಠಾಣಾ ಪಿಎಸ್‌ಐ ತಿರುಮಲೇಶ್ ನಾಯ್ಕ್ ಪಿಎಸ್‌ಐ ಎಸ್.ಪಿ ಹೊಸಮನಿ ನೇತೃತ್ವದಲ್ಲಿ,

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

ಸಾಗರ ಗ್ರಾಮಾಂತರ ಪೊಲೀಸ್ ಕ್ರೈಮ್ ಸಿಬ್ಬಂದಿಗಳಾದ CHC, ಸನಾವುಲ್ಲಾ, ಷೇಖ್ ಪೈರೋಜ್ ಅಹಮದ್ CPC ರವಿಕುಮಾರ್, CPC ಹನುಮಂತ ಜಂಬೂರ್ ರವರನ್ನೊಳಗೊಂಡ ತಂಡವು ಈ ಪ್ರಕರಣದ 1ನೇ ಆರೋಪಿ ಚಿರಂಜೀವಿ @ ಚಿರು 35 ವರ್ಷ, ಹಾಲುಗುಡ್ಡೆ ಗ್ರಾಮ ಹೊಸನಗರ ತಾಲ್ಲೂಕ್ 2 ನೇ ಆರೋಪಿ ಪ್ರವೀಣ ಪಾಂಡು 25 ವರ್ಷ,ಗೇರು ಬೀಸು ಗ್ರಾಮ ಸಾಗರ ತಾಲ್ಲೂಕ್ ಈ ಇಬ್ಬರು ಆರೋಪಿಗಳು ಸೇರಿ ಕಳ್ಳತನದ ಕೃತ್ಯದೆಸಗಿದ್ದು, 1 ನೇ ಆರೋಪಿ ಚಿರಂಜೀವಿ ಯನ್ನು ದಿನಾಂಕ:-03-04-2023 ರಂದು ಮದ್ಯಾಹ್ನ 2.45 ಗಂಟೆಗೆ ಸಾಗರ ತಾಲ್ಲೂಕ್ ಬಳಸಗೋಡು ಗ್ರಾಮದ ಹತ್ತಿರ ಮಾಲಿನೊಂದಿಗೆ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ಆರೋಪಿಯಿಂದ 2,00,000/- ರೂ ಬೆಲೆಯ ಬೋರ್‌ವೆಲ್ ಕೇಸಿಂಗ್ ಪೈಪ್‌ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 10.00.000/- ರೂ ಬೆಲೆಯ ಒಂದು 65-703037 ನೇ ಟಿಪ್ಪರ್ ಲಾರಿಯನ್ನು ಅಮಾನತ್ತು ಮಾಡಿ ಈ ಪ್ರಕರಣದ 2 ನೇ ಆರೋಪಿ ಪ್ರವೀಣ ಪಾಂಡು ತಲೆ ಮರೆಸಿಕೊಂಡಿದ್ದು ಈತನನ್ನು ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಗಳ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಾದ ಮಿಥುನ್ ಕುಮಾರ್,IPS ಅಭಿನಂದನೆ ಸಲ್ಲಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *