
ನಂಜನಗೂಡು: ಫರ್ನಿಚರ್ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ನಂಜನಗೂಡಿನಲ್ಲಿ ಜರುಗಿದೆ
ನಗರದ ಎಂಜಿಎಸ್ ರಸ್ತೆಯ ಅಶೋಕ ಪುರಂ ಇರುವ ಸಾಧಿಕ್ ಪಾಷಾ ಎಂಬುವವರಿಗೆ ಸೇರಿದ ಸಫಾ ಫರ್ನಿಚರ್ ತಯಾರಿಕಾ ಘಟಕಕ್ಕೆ ಬಿದ್ದಿರುವ ಬೆಂಕಿ. ಬೆಳಗಿನ ಜಾವ ಆಕಸ್ಮಿಕ ಬಿದ್ದ ಬೆಂಕಿಯ ಕೆನ್ನಾಲಿಗೆಗೆ ಇಡೀ ಫ್ಯಾಕ್ಟರಿ ಹಾಗೂ ಉಗ್ರಾಣದಲ್ಲಿದ್ದ ಅಲ್ಮೆರಾಗಳು ಸೋಫಾ ಸೆಟ್ಗಳು ಕುರ್ಚಿಗಳು ಸೇರಿದಂತೆ ತಯಾರಿಕಾ ಘಟಕದಲ್ಲಿದ್ದ ಎಲ್ಲಾ ಉಪಕರಣಗಳು ತಯಾರಿಕಾ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ಇದರಿಂದಾಗಿ ಸುಮಾರು 50 ಲಕ್ಷ ರೂಪಾಯಿ ಎಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಫ್ಯಾಕ್ಟರಿಯ ಪಕ್ಕದಲ್ಲಿದ್ದ ಮಾಲೀಕರ ಮನೆಗೂ ಸಹ ಬೆಂಕಿ ಆವರಿಸಿ ಹೊರಗಡೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಅಷ್ಟರಲ್ಲಿ ಗ್ರಾಮಸ್ಥರ ಸಂಪೂರ್ಣ ನೆರವಿನಿಂದ ಕುಟುಂಬಸ್ಥರು ಅದೃಷ್ಟವಸಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿ ಅನಾಹುತಕ್ಕೆ ಶಾರ್ಟ್ಸಸರ್ಕ್ಯೂಟ್ ಎಂದು ಹೇಳಲಾಗುತ್ತಿದ್ದರೂ ಕಾರಣ ತಿಳಿದು ಬಂದಿಲ್ಲ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಯವರ ಬೇಜವಾಬ್ದಾರಿಯಿಂದಾಗಿ ಕಾರ್ಯಾಚರಣೆ ಒಂದು ಗಂಟೆ ತಡವಾದ ಕಾರಣ ಅಷ್ಟರಲ್ಲಾಗಲೇ ಇಡೀ ಫ್ಯಾಕ್ಟರಿ ಭಸ್ಮವಾಗಿತ್ತು ಎಂದು ತಿಳಿದುಬಂದಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಸಹ ಹರ ಸಾಹಸ ಪಟ್ಟಿದ್ದಾರೆ. ಮಾಲಿಕ ಸಾಧಿಕ್ ಪಾಷಾ ಮಾತನಾಡಿ ಘಟನೆಯ ಬಗ್ಗೆ ವಿವರಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655