ಧ್ರುವ ನಾರಾಯಣ್ ರವರ ಕನಸನ್ನು ಅವರ ಪುತ್ರ ದರ್ಶನ್ ಅವರಿಂದ ನನಸು ಮಾಡೋಣ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಪತ್ರಕರ್ತ ಕೆ ದೀಪಕ್ ಡಾಕ್ಟರ್ ಡಿ ತಿಮ್ಮಯ್ಯ.

ತಾಂಡವಪುರ: ಧ್ರುವ ನಾರಾಯಣ್ ರವರ ಕನಸನ್ನು ಅವರ ಪುತ್ರ ದರ್ಶನ್ ಅವರಿಂದ ನನಸು ಮಾಡೋಣ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಪತ್ರಕರ್ತ ಕೆ ದೀಪಕ್ ಡಾಕ್ಟರ್ ಡಿ ತಿಮ್ಮಯ್ಯ.

ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ್ ರವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಿದಂತಹ ಮಹಾನ್ ನಾಯಕ ಅವರನ್ನು ಕಳೆದುಕೊಂಡು, ನಾವು ಹಾಗೂ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಧ್ರುವನಾರಾಯಣ್ ರವರ ಕನಸನ್ನು ನನಸು ಮಾಡಲು ಅವರ ಪುತ್ರ ದರ್ಶನ್ ಧ್ರುವನಾರಾಯಣ್ ರವರನ್ನು ನಂಜನಗೂಡಿನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಿಸುವ ಮೂಲಕ ನನಸು ಮಾಡೋಣ ಎಂದು ವರುಣ ಕ್ಷೇತ್ರದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಡಿ ತಿಮ್ಮಯ್ಯ, ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಕೆ ದೀಪಕ್ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್ ಅವರು ತಿಳಿಸಿದರು. ಅವರು ಇಂದು ವರುಣ ಕ್ಷೇತ್ರದ ಕುಪ್ಪರವಳ್ಳಿ ಗ್ರಾಮದ ಬಳಿ ತಗಡೂರು ಬ್ಲಾಕ್ ವರುಣ ಬ್ಲಾಕ್ ಕಾಂಗ್ರೆಸ್ ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಏರ್ಪಡಿಸಿದ್ದ ದಿವಂಗತ ಆರ್ ಧ್ರುವನಾರಾಯಣ್ ರವರ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ಹಾಗೂ ಡಾಕ್ಟರ್ ಡಿ ತಿಮ್ಮಯ್ಯ ಹಾಗೂ ಕೆ ದೀಪಕ್ ರವರು ಮಾತನಾಡಿ ಧ್ರುವನಾರಾಯಣ್ ರವರ ಕನಸು ಮುಂದಿನ ಪೀಳಿಗೆಗೆ ಯುವ ರಾಜಕಾರಣಿಗಳನ್ನು ಬೆಳೆಸಬೇಕು ಅದಕ್ಕಾಗಿ ಶಿಬಿರಗಳನ್ನು ನಡೆಸಬೇಕು ಆ ದೃಷ್ಟಿಯಿಂದ ಪ್ರತಿ ಜಿಲ್ಲೆಗೊಂದು ರಾಜಕಾರಣಿ ತರಬೇತಿ ಕೇಂದ್ರ ತೆಗೆಯಬೇಕೆಂಬುದು ಅವರ ಆಶಯವಾಗಿತ್ತು ಅದನ್ನು ನನಸು ಮಾಡಲು ನಾವೆಲ್ಲರೂ ಸೇರಿ ಅವರ ಪುತ್ರ ದರ್ಶನ್ ರವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಿ ಅವರನ್ನು ಗೆಲ್ಲಿಸುವ ಮೂಲಕ ಅವರ ಈ ಎಲ್ಲ ಕನಸುಗಳನ್ನು ನನಸು ಮಾಡೋಣ ಎಂದರು. ಮುಂದುವರೆದು ಮಾತನಾಡಿದ ಶಾಸಕರು ನಾನು ರಾಜಕೀಯ ಪ್ರವೇಶ ಮಾಡುವಾಗ ನನಗೆ ಕ್ಷೆತ್ರದಲ್ಲಿ ಪರಿಚಯ ಇರಲಿಲ್ಲ ಈ ಕ್ಷೇತ್ರದ ಜನತೆಯ ಪರಿಚಯವನ್ನು ಮಾಡಿಕೊಟ್ಟವರು ಆರ್ ಧ್ರುವ ನಾರಾಯಣ್ ರವರು ಅವರ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹಿರಿಯ ಪತ್ರಕರ್ತ ಕೆ ದೀಪಕ್, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‍ಸಿ ಬಸವರಾಜು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ವೀರಶೈವ ಮುಖಂಡರು ಆದ ಗುರುಪಾದ ಸ್ವಾಮಿ ವರುಣ ಮಹೇಶ್ ಜಿಲ್ಲಾ ಪಂಚಾಯಿತಿ, ಮಾಜಿ ಅಧ್ಯಕ್ಷ ಬಿ ಎಂ ರಾಮು ತಗಡೂರು ಹಾಗೂ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಹಾಡ್ಯ ರಂಗಸ್ವಾಮಿ ರಮೇಶ್ ಮುದ್ದೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಜುಳಾ ಮಂಜುನಾಥ್, ಲತಾ ಸಿದ್ದಶೆಟ್ಟಿ ಪುರಸಭೆ ಅಧ್ಯಕ್ಷರಾದ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷರಾದ ಸೋಮು, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮಿ ಬಿಪಿ ಮಹದೇವು ನಂಜುಂಡೇಗೌಡ, ಮುಖಂಡರಾದ ಸಿಆರ್ ಮಹದೇವ್ ನಾಗೇಶ್ ರಾಜು, ಮಲ್ಕೊಂಡಿ ಮಹದೇವಸ್ವಾಮಿ ಸಕಳ್ಳಿ, ಬಸವರಾಜು ಸುತ್ತೂರು ಸೋಮಣ್ಣ, ಜಗದೀಶ ಹೆಬ್ಬೆ, ರಾಜು ಕಲ್ಮಳ್ಳಿ, ಸುರೇಶ್ ಬಾಬು, ಕುಮಾರ ಗುರುಪಾದ ಸೇರಿದಂತೆ ವರುಣ ಕ್ಷೇತ್ರದ ಸುಮಾರು 2000ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ ಧ್ರುವನಾರಾಯಣ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655

Leave a Reply

Your email address will not be published. Required fields are marked *