ಯುವ ಭಾರತ್ ಸಂಘಟನೆ ವತಿಯಿಂದ ಹೋರಾಟಗಾರರ ಬಲಿದಾನ ದಿವಸದ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ ಹೋರಾಟಗಾರರ ಬಲಿದಾನ ದಿವಸದ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಯುವ ಭಾರತ್ ಸಂಘಟನೆ ವತಿಯಿಂದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್, ಬಲಿದಾನ ದಿವಸದ ಅಂಗವಾಗಿ ನಗರದ ನಾರಾಯಣಸ್ವಾಮಿ ರಸ್ತೆಯಲ್ಲಿರುವ ಸ್ವತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಜೈ ಹಿಂದ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಅವರ ಪ್ರತಿಮೆಗೆ ಮಾಲಾರ್ಪಣೆ
ಮಾತನಾಡಿದ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ಭ ರತಪೂರ್ವ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಮೈಸೂರಿನಲ್ಲಿ ಹೆಚ್ವು ಹೋರಾಟಗಳು ನಡೆಯುತ್ತಿದ್ದದ್ದು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರಬಿಂದು ಸುಬ್ಬರಾಯನ ಕೆರೆ, ಕ್ರಾಂತಿಕಾರಿ ಭಗತ್ ಸಿಂಗ್ ರವರು ರವರ ಹೋರಾಟದ ಕಿಚ್ಚು ಲಕ್ಷಾಂತರ ಭಾರತೀಯರನ್ನ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೆಣೆ ನೀಡಿತು, ತಂದೆಯೊಂದಿಗೆ ಭಗತ್ ಸಿಂಗ್ ವ್ಯವಸಾಯ ಮಾಡಲು ಹೋಗುತ್ತಿದ್ದಾಗ ಚಿಕ್ಕವಯಸ್ಸಿನಲ್ಲೇ ಭತ್ತದ ಬಂದೂಕು ಬೆಳೆಯುವ ಚಿಂತನರ ಮಾಡಿ ಭಾರತೀಯರೂ ಶಾಂತಿ ಮಾರ್ಗದ ಹೋರಾಟದ ಜೊತೆಯಲ್ಲೇ ಬ್ರಿಟೀಷರ ವಿರುದ್ಧ ಕ್ರಾಂತಿ ಮಾರ್ಗ ಹಿಡಿದರೇ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ ಎಂದವರು ಕ್ರಾಂತಿಕಾರಿ ಭಗತ್ ಸಿಂಗ್ ಎಂದರು, ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿ ಮಂಜು ರವರು ಮಾತನಾಡಿ ಭಗತ್ ಸಿಂಗ್ ರಾಜಗುರು ಸುಖದೇವ್ ರವರ ಬಲಿದಾನ ತ್ಯಾಗದಿಂದಾಗಿ ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು, ನಾವು ಇಂದಿಗೆ ನೆಮ್ಮದಿಯಾಗಿದ್ದೇವೆ ಎಂದರೆ ಭಗತ್ ಸಿಂಗ್ ರವರಂತಹ ವೀರಹುತಾತ್ಮರೇ ಕಾರಣ. ಅಂತ ಮಹನೀಯರ ಸ್ಮರಣೆಯನ್ನು ಮನೆಮನಗಳಲ್ಲಿ ಯುವಪೀಳಿಗೆಯೊಂದಿಗೆ ಸ್ಮರಿಸಬೇಕು ಎಂದರು. ಸಾಮಾಜಿಕ ಹೋರಾಟಗಾರ
ಅಜಯ್ ಶಾಸ್ತ್ರಿ ಮಾತನಾಡಿ ಅಂದು ಜಲಿಯನ್ ವಾಲಬಾಗಿನಲ್ಲಿ ಬ್ರಿಟಿಷರ ವಿರುದ್ಧ ಭಾರತೀಯರ ಸಾಮರ್ಥ್ಯತೆಯ ನಿರ್ಣಯದ ಸಮಾವೇಶದ ಸಂದರ್ಭದಲ್ಲಿ ಬ್ರಿಟಿಷರ ಕುತಂತ್ರದಿಂದ ಗುಂಡೇಟಿನ ಕಾಲ್ತುಳಿಕೆ 120ಮಂದಿ ಬಲಿಯಾದರು, ಅಲ್ಲೊಬ್ಬ 12ವರ್ಷದ ಯುವಕ ಗೋಲಿಯಾಟವಾಡುವ ವಯಸ್ಸಿನವನು, ಗೋಲಿಬಾರ್ ಕಣ್ಣಾರೆ ಕಂಡನು.

ದೇಶಪ್ರೇಮದ ಕಿಚ್ಚೇಬಿತು, ಮನೆಗೆ ತೆರಳುವ ವೇಳೆಯಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ರಕ್ತವನ್ನು ಗಾಜಿನ ಬಾಟಲಿನಲ್ಲಿ ತುಂಬಿಕೊಂಡು ಬಿಳಿಯರ ವಿರುದ್ಧ ಸ್ವಾತಂತ್ರ್ಯದ ಸೇಡಿನ ಪ್ರತೀಕಾರ ತೀರಿಸುತ್ತೇನೆ ಇಂಕ್ವಿಲಾಬ್ ಜಿಂದಾಬಾದ್ ಎಂದು ಶಪಥ ಮಾಡುತ್ತಾನೆ, ಆ ಮಹಾನ್ ವ್ಯಕ್ತಿಯೇ ಭಗತ್ ಸಿಂಗ್ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಬಿಜೆಪಿ ನಗರ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಮೂಡ ಸದಸ್ಯರಾದ ನವೀನ್ ಕುಮಾರ್, ಅಜಯ್ ಶಾಸ್ತ್ರಿ, 23ನೇ ವಾರ್ಡಿನ ಅಧ್ಯಕ್ಷರಾದ ಸುರೇಂದ್ರ, ಯುವ ಭಾರತ್ ಸಂಘಟನೆಯ ಸಂಚಾಲಕರಾದ ಶರತ್ ಭಂಡಾರಿ, ಲಿಂಗರಾಜು, ವಿಘ್ನೇಶ್ವರ ಭಟ್, ಸುದರ್ಶನ್, ಸುಚೇಂದ್ರ, ಶ್ರೀನಿವಾಸ್, ವಿಜಯಾನಂದ, ಆನಂದ್, ಸುಕನ್ಯ, ಗೀತಾ, ಪದ್ಮ, ದಿವ್ಯ, ನವೀನ್, ಚರಣ್, ಹಾಗೂ ಇನ್ನಿತರರು ಭಾಗವಹಿಸಿದ್ದರು.

-ವರದಿ ನಂದಿನಿ ಮೈಸೂರು

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655

Leave a Reply

Your email address will not be published. Required fields are marked *