
ಕೆ ಆರ್ ಪೇಟೆ: ಸಂಕಷ್ಟ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್.
ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚಿಕ್ಕಮಂದಿಗೆರೆ ಗ್ರಾಮದ ಸಣ್ಣಪುಟ್ಟೇಗೌಡರ ಮಗ ಜವರೇಗೌಡ ಕೃಷಿ ಕೂಲಿ ಕೆಲಸಕ್ಕೆ ತೆರಳಿ ಕೃಷಿ ಚಟುವಟಿಕೆ ಮಾಡುತ್ತಿದ್ದಂತ ಸಮಯದಲ್ಲಿ ಒಣಗಿದ ತೆಂಗಿನ ಮರ ಮೇಲೆ ಬಿದ್ದು ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಬಡ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಆತ್ಮಸ್ಥೈರ್ಯ ಹೇಳಿ ಮಾತನಾಡಿದ ಆರ್‌ಟಿಓ ಮಲ್ಲಿಕಾರ್ಜುನ್ ಮನೆಯ ಆಧಾರ ಸ್ಥಂಭವಾಗಿದ್ದ ಜವರೇಗೌಡರಿಗೆ ಬೇಗ ಗುಣಮುಖರಾಗುತ್ತಾರೆ ನಿಮ್ಮ ಜೊತೆ ನಾವು ಇದ್ದೇವೆ ನೀವು ಧೈರ್ಯದಿಂದ ಇರಿ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಮತ್ತಷ್ಟು ನನ್ನ ಕೈಲಾದ ಸಹಾಯ ಮಾಡುತ್ತೇನೆ ನೀವು ಬೇಗ ಗುಣಮುಖರಾಗುತ್ತೀರಿ ಎಂದು ತಿಳಿಸಿದರು. ನಂತರ ಮಾತನಾಡಿದ ಗ್ರಾಮದ ದೇವರಾಜು ಕೃಷಿ ಕೂಲಿಯನ್ನೇ ಅವಲಂಬಿಸಿ ಬದುಕುತ್ತಿದ್ದ ಕಡು ಬಡ ಕುಟುಂಬ ಇವರ ಜಮೀನಿನಲ್ಲಿ ಬೆಳೆದ ಬೆಳೆಯು ಸೂಕ್ತ ಬೆಲೆಗೆ ಮಾರಾಟವಾಗಿರಲಿಲ್ಲ ಈ ಬಡ ಕುಟುಂಬದ ಆಧಾರಸ್ತಂಭ ವ್ಯಕ್ತಿ ಬೇರೆಯವರ ಜಮೀನಿನಲ್ಲಿ ದಿನ ಕೂಲಿ ಕೆಲಸ ಮಾಡಿಕೊಂಡು ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಒಂದು ದಿನ ಕೂಲಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಒಣಗಿ ನಿಂತಿದ್ದ ತೆಂಗಿನ ಮರ ಇವರ ಮೇಲೆ ಬಿತ್ತು ತೀವ್ರವಾಗಿ ಗಾಯವಾಗಿ ಅಸ್ವಸ್ಥರಾಗಿದ್ದವರನ್ನು ಗ್ರಾಮಸ್ಥರು ಹಾಸನದ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದರು. ಇವರ ಬಳಿ ಹಣ ಇಲ್ಲದ ಕಾರಣ ವೈದ್ಯರು ಮೂರು ತಿಂಗಳ ನಂತರ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಅಲ್ಲಿಯವರೆಗೆ ಇವರು ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಎಂದು ತಿಳಿಸಿದರು ಈ ಬಡ ಕುಟುಂಬ ಸಂಕಷ್ಟ ಅರಿತು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಈ ಬಡ ಕೃಷಿ ಕೂಲಿ ಕಾರ್ಮಿಕ ಕುಟುಂಬಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದ್ಯಸ ದೊದ್ದೇಗೌಡ, ದೇವರಾಜು, ಸುರೇಶ್, ಶಿವರಾಮ್, ಮಹದೇವ್, ಪ್ರಕಾಶ್, ಪಾಪೇಗೌಡ, ತಮ್ಮಣ್ಣಗೌಡ, ಸಣ್ಣಪುಟ್ಟೇಗೌಡ, ರಂಗೇಗೌಡ, ಶಿವಣ್ಣ, ಮಂಜುನಾಥ್ ಸೇರಿದಂತೆ ಉಪಸ್ಥಿತರಿದ್ದರು.
