ಇಂದು ಬಾಂಬೆ ರಿಟರ್ನ್ ಡೇಸ್ ರಿಲೀಸ್.

ಮೈಸೂರು: ಇಂದು ಸಂಜೆ 6:30 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಪುಸ್ತಕ ರೂಪದಲ್ಲಿ ಬಾಂಬೆ ಡೇಸ್ ಸ್ಟೋರಿ. ಆಪರೇಷನ್ ಕಮಲಕ್ಕೆ ಒಳಗಾಗಿದ್ದ 17 ಶಾಸಕರ ಬಗೆಗಿನ ಪುಸ್ತಕ ಇಂದು ಬಿಡುಗಡೆ. ಜೆಡಿಎಸ್, ಕಾಂಗ್ರೆಸ್‌ಗೆ ಕೈ ಕೊಟ್ಟು ಬಾಂಬೆ ಸೇರಿದ್ದ ಶಾಸಕರ ಸ್ಟೋರಿ ಪುಸ್ತಕ. ಚುನಾವಣೆ ಹೊಸ್ತಿಲಲ್ಲಿ ಲೋಕಾರ್ಪಣೆಯಾಗುತ್ತಿರುವ ಪುಸ್ತಕ. ಬಾಂಬೆ ರಿಟರ್ನ್ ಡೇಸ್ ಸೆನ್ಸ್‌ಲೆಸ್ ಪಾಲಿಟ್ರಿಕ್ಸ್ ಪುಸ್ತಕ ಬಿಡುಗಡೆ. ಪುಸ್ತಕ ಬರೆದಿರೋದು ಎಂಎಲ್ಸಿ ವಿಶ್ವನಾಥ್ ಅಲ್ಲ. ಮೈಸೂರಿನವರೇ ಆದ ವೀರಭದ್ರಪ್ಪ ಬಿಸ್ಲಳ್ಳಿ ಸಾಹಿತಿ, ಹಿರಿಯ ಪತ್ರಕರ್ತರಾಗಿರುವ ವಿ.ವೀರಭದ್ರಪ್ಪ ಬಿಸ್ಲಳ್ಳಿ. ವಿ.ವೀರಬದ್ರಪ್ಪ ಬರೆದಿರುವ 200 ಪುಟಗಳ ಪುಸ್ತಕ. ಮೈಸೂರು ಮೂಲದ ಸಾಹಿತಿ ವಿ.ವೀರಭದ್ರಪ್ಪ ಬಿಸ್ಲಳ್ಳಿ. ಬಸವನಗುಡಿ ಸುಜಯ್ ಪಬ್ಲಿಕೇಷನ್ಸ್‌ನಲ್ಲಿ ಮುದ್ರಣಗೊಂಡಿರುವ ಪುಸ್ತಕಗಳು. ಮೈಸೂರು ವಿಶ್ವಯ್ಯ ಬುಕ್‌ಹೌಸ್‌ಗೆ ಮಾರಾಟದ ಅನುಮತಿ. ರಾಜ್ಯ ಉಚ್ಚ ನ್ಯಾಯಾಲಯ ವಕೀಲ ಸಿ.ಎನ್ ಹನುಮಂತರಾಯಪ್ಪ ರಿಂದ ಪುಸ್ತಕ ಬಿಡುಗಡೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆ ಸೇರಿದ್ದ ಹದಿನೇಳು ಮಂದಿ ಶಾಸಕರು. ಮುಂಬೈ ಖಾಸಗಿ ಹೊಟೇಲ್‌ನಲ್ಲಿ ಕಳೆದ ದಿನಗಳು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇಗೆ, ಸಿದ್ದು ಡಿಕೆಶಿ ಪಾತ್ರ, ಜಾರಕಿಹೊಳಿ ರಾಜೀನಾಮೆ ಪ್ರಕರಣ, ಬಿಎಸ್‌ವೈ ರಾಜೀನಾಮೆ ಹೀಗೆ ಹಲವಾರು ಸಂಗತಿಗಳ ಬಗ್ಗೆ ಉಲ್ಲೇಖ. ಮುಂಬೈಗೆ ತೆರಳಿದ್ದ ಕೆಲವರಿಗೆ ಪುಸ್ತಕ ಬಿಡುಗಡೆಗೆ ಆಹ್ವಾನ..?. ಬಾಂಬೆ ಮಿತ್ರಮಂಡಳಿಗೆ ಮುಳುವಾಗುತ್ತಾ ಬಾಂಬೆ ರಿಟರ್ನ್ ಡೇಸ್ ಪುಸ್ತಕ..?

Leave a Reply

Your email address will not be published. Required fields are marked *