
ಮೈಸೂರು: ಕ. ಸಾ. ಪ. ಉಪಾಧ್ಯಕ್ಷರಾಗಿ ಜಾಕೀರ್ ಹುಸೇನ್ ನೇಮಕ.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ 2022 ನೇ ಸಾಲಿನ ಜಿಲ್ಲಾಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಸ್ತುತ ದೇವರಾಜಾ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್ ರವರಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ನೇಮಕ ಮಾಡಿದರು. ಈ ಸಂಧರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತ ಸಿ. ಪಿ. ಕೃಷ್ಣಕುಮಾರ್, ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಶ್ರೀ ಅಂಶಿ ಪ್ರಸನ್ನ ಕುಮಾರ, ಕನ್ನಡ. ಸಾ. ಪ. ನಿಕಟಪೂರ್ವ ಅಧ್ಯಕ್ಷರಾದ ಡಾ. ವೈ. ಡಿ. ರಾಜಣ್ಣ, ಕ. ಸಾ. ಪ. ಮಾಜಿ ಅಧ್ಯಕ್ಷರಾದ ಎಂ. ಚಂದ್ರಶೇಖರ್, ಪ್ರೊ. ವಸಂತ್ ಕುಮಾರ್, ಪ್ರಶಾಂತ್ ಆರ್ಯ, ಪವನ್ ಸಿದ್ದರಾಮ, ರಧಿವುಲ್ಲಾ ಖಾನ್ ಮುಂತಾದವರು ಉಪಸ್ಥಿತರಿದ್ದರು.
