
ಶಿವಮೊಗ್ಗ: ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ಶಿವಮೊಗ್ಗದ “ಕುವೆಂಪು” ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿ, ಮಲೆನಾಡಿನ ಅಭಿವೃದ್ಧಿಯಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಶ್ರೀ ನರೇಂದ್ರ ಮೋದಿ ಜೀ ಯವರಿಗೆ ಸಾಗರದ ಅದರ್ಶರವರು ನಿರ್ಮಿಸಿರುವ ವಿಮಾನ ನಿಲ್ದಾಣ ಮಾದರಿಯ ಸ್ಮರಣಿಕೆಯನ್ನು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರೊಂದಿಗೆ ಶ್ರೀ ನರೇಂದ್ರ ಮೋದಿ ಜೀ ಯವರಿಗೆ ನೀಡಿ, ಗೌರವಿಸಲಾಯಿತು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸಂಸದರಾದ ಬಿ.ವೈ ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಡಾ. ಕೆ.ಸಿ ನಾರಾಯಣ ಗೌಡ, ವಿ.ಸೋಮಣ್ಣ, ಭೈರತಿ ಬಸವರಾಜ್, ಸಿ.ಸಿ ಪಾಟೀಲ್, ಎಸ್.ಟಿ ಸೋಮಶೇಖರ್, ಶಾಸಕರಾದ ಅಶೋಕ್ ನಾಯ್ಕ್, ಕುಮಾರ್ ಬಂಗಾರಪ್ಪ, ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ರುದ್ರೇಗೌಡ್ರು, ಡಿ.ಎಸ್ ಅರುಣ್ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಮಹತ್ತರ ಉಡಾನ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಈ ನಿಲ್ದಾಣ ರಾಜ್ಯದ ಎರಡನೇ ಬೃಹತ್ ವಿಮಾನ ನಿಲ್ದಾಣವಾಗಿದೆ.ರಾಜ್ಯದ 9ನೇ ವಿಮಾನ ನಿಲ್ದಾಣ ಇದಾಗಿದ್ದು, ದೇಶದಲ್ಲಿಯೇ ಅತೀ ಹೆಚ್ಚು ವಿಮಾನಯಾನ ಸೇವೆ ಹೊಂದಿದ ಎರಡನೇ ರಾಜ್ಯ ನಮ್ಮದಾಗಿದೆ. 3,200 ಮೀ ರನ್ ವೇ ಕೂಡ ಈ ನಿಲ್ದಾಣ ಹೊಂದಿದ್ದು ರಾಜ್ಯದ ಎರಡನೇ ಅತೀ ಉದ್ದದ ರನ್ ವೇ ಇದಾಗಿದೆ. ಕಮಲಾಕೃತಿಯ ಈ ನಿಲ್ದಾಣ ಗ್ರೀನ್ ಫೀಲ್ಡ್ ನಿಲ್ದಾಣವಾಗಿದ್ದು, ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನವಿಟ್ಟು ನಿರ್ಮಾಣ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಯ 44 ಯೋಜನೆಗಳನ್ನು ಉದ್ಘಾಟಿಸಿದ ಮಾನ್ಯ ಪ್ರಧಾನಿಗಳು ಶಿವಮೊಗ್ಗ ಕೇಂದ್ರ ಡೈರಿಯ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಅತ್ಯಾಧುನಿಕ ಹಾಲು ಮತ್ತು ಮೊಸರು ಘಟಕಕ್ಕೆ ಚಾಲನೆ ನೀಡಿದರು ಹಾಗೂ APMC ಯ ನೂತನ ಆಡಳಿತ ಕಚೇರಿಯನ್ನು ಲೋಕಾರ್ಪಣೆ ಮಾಡಿ ಹಲವು ಯೋಜನೆಗಳ ಶಿಲಾನ್ಯಾಸ ಕೂಡ ನೆರವೇರಿಸಿದರು.
ಶಿಲಾನ್ಯಾಸ ಮಾಡಲಾದ ಯೋಜನೆಗಳ ವಿವರ ಈ ಕೆಳಗಿನಂತಿದೆ:
- ಶಿವಮೊಗ್ಗ – ಶಿಕಾರಿಪುರ – ರಾಣಿಬೆನ್ನೂರು ಹೊಸ ರೈಲ್ವೇ ಮಾರ್ಗ ಕಾಮಗಾರಿ
- ಕೋಟೆಗಂಗೂರು ಹೊಸ ರೈಲ್ವೇ ಡಿಪೋ ಕಾಮಗಾರಿ
- ಬಹುಗ್ರಾಮ ಕುಡಿಯುವ ನೀರಿನ ಯೋಜನೆ
- ಬೈಂದೂರು – ರಾಣಿಬೆನ್ನೂರು ಹೆದ್ದಾರಿಯಲ್ಲಿ 14.7 km ಶಿಕಾರಿಪುರ ಬೈಪಾಸ್ ನಿರ್ಮಾಣ ಕಾಮಗಾರಿ
- ತೀರ್ಥಹಳ್ಳಿ – ಮಲ್ಪೆ ಹೆದ್ದಾರಿಯ ಆಗುಂಬೆ ಯಿಂದ ಮೇಗರವಳ್ಳಿ ನಡುವಿನ 17 KM ರಸ್ತೆ ದ್ವಿಪಥ ಕಾಮಗಾರಿ
- ಶಿವಮೊಗ್ಗ – ಮಂಗಳೂರು ಹೆದ್ದಾರಿಯ ತೀರ್ಥಹಳ್ಳಿ ಭಾರತೀಪುರದ ರಸ್ತೆ ಮತ್ತು ತಿರುವು ಅಭಿವೃದ್ಧಿ ಯೋಜನೆ
ರಾಜ್ಯದ ಪ್ರಗತಿಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಸತತವಾಗಿ ಶ್ರಮಿಸುತ್ತಿದ್ದು, ಶಿವಮೊಗ್ಗದ ಈ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲಾಗಿದೆ.
