ಕೇಂದ್ರಸರ್ಕಾರದಿಂದ ಪದ್ಮ ಪ್ರಶಸ್ತಿ ಘೋಷಣೆ: ಮಾಜಿ ಸಿಎಂ ಎಸ್.ಎಂ ಕೃಷ್ಣ, ಸುಧಾಮೂರ್ತಿ, ಎಸ್.ಎಲ್ ಬೈರಪ್ಪ ಸೇರಿ 106 ಸಾಧಕರಿಗೆ ಪುರಸ್ಕಾರ.
74ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನು ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಲ್, ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಸೇರಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. 2023ನೇ ಸಾಲಿಗೆ 106 ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಈ ಪಟ್ಟಿಯಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. 19 ಪ್ರಶಸ್ತಿ ಪುರಸ್ಕೃತರು ಮಹಿಳೆಯರು ಮತ್ತು ಈ ಪಟ್ಟಿಯಲ್ಲಿ ವಿದೇಶಿಯರು / ಎನ್ಆರ್ಐ / ಪಿಐಒ / ಒಸಿಐ ವರ್ಗದಿಂದ 2 ವ್ಯಕ್ತಿಗಳು ಮತ್ತು 7 ಮರಣೋತ್ತರ ಪ್ರಶಸ್ತಿ ವಿಜೇತರು ಸೇರಿದ್ದಾರೆ.
ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ), ಆರ್ಆರ್ಆರ್ ಚಲನಚಿತ್ರ ಸಂಯೋಜಕ ಎಂಎಂ ಕೀರವಾಣಿ, ನಟಿ ರವೀನಾ ರವಿ ಟಂಡನ್ ಸೇರಿದಂತೆ 91 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾಜವಾದಿ ಪಕ್ಷದ ದಿವಂಗತ ಮುಲಾಯಂ ಸಿಂಗ್ ಯಾದವ್, ದಿವಂಗತ ಓಆರ್ಎಸ್ ಪ್ರವರ್ತಕ ದಿಲೀಪ್ ಮಹಾಲನಬಿಸ್, ಸಂಗೀತಗಾರ ಜಾಕೀರ್ ಹುಸೇನ್, ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸ್ ವರದನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.