
ಮೈಸೂರು : 11ದಿನಗಳ ನಂತರ ಸ್ಯಾಂಟ್ರೋ ರವಿ ಬಂಧಿಸಿದ ಮೈಸೂರು ಪೋಲಿಸರು.
ಗುಜರಾತಿನ ಅಹಮದಾಬಾದ್ ನಗರದಲ್ಲಿ ಸ್ಯಾಂಟ್ರೋರವಿ ಸಿಕ್ಕಿಬಿದ್ದಿದ್ದಾನೆ ಎಂದು
ಎಡಿಜಿಪಿ ಅಲೋಕ್ ಕುಮಾರ್ ರವರು ಇಂದು ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಅರೆಸ್ಟ್ ಆದ ಮಾಹಿತಿ ನೀಡಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಮಂಜುನಾಥ್ ಕೆ ಎಸ್ @ ಸ್ಯಾಂಟ್ರೋರವಿ (51) ಜೊತೆಗೆ
ರಾಮ್ ಜೀ (45),
ಸತೀಶ್ ಕುಮಾರ್ (35) ರವರನ್ನೂ ಸಹ ಬಂಧಿಸಲಾಗಿದೆ.
ಮೈಸೂರು ನಗರ ಪೊಲೀಸ್‌ರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಸ್ಯಾಂಟ್ರೋರವಿಯನ್ನ ಅರೆಸ್ಟ್ ಮಾಡಿದ್ದಾರೆ.ದೂರು ದಾಖಲಾದ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚರಿಸಿದ್ದಾನೆ.
ನಾವು ಅವನನ್ನ ಪತ್ತೆ ಹಚ್ಚಲಿಕ್ಕೆ ಮುಂದಾದಾಗ ಬೇರೆ ರಾಜ್ಯಕ್ಕೆ ಹೋಗಿದ್ದಾನೆ.
ಈಗ ಗುಜರಾತ್ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಅವರ ಅನುಮತಿ ಪಡೆದು ರಾಜ್ಯಕ್ಕೆ ಕರೆದುಕೊಂಡು ಬರುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ಬೆಂಗಳೂರು ಎರಡು ಕಡೆಗಳಲ್ಲಿ ಸ್ಯಾಂಟ್ರೋರವಿ ವಾಸವಿದ್ದ ಮನೆಗಳನ್ನ ಪರಿಶೀಲನೆ ಮಾಡಿದ್ದೀವಿ.ಇದಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆ, ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದೆವು.
ಪೊಲೀಸರಿಂದ ತಪ್ಪಿಸಿಕೊಳ್ಳೊಕೆ ಮೊಬೈಲ್, ಸಿಮ್ ಬದಲಾವಣೆ ಮಾಡಿದ್ದಾನೆ.ಸ್ಥಳ ಬದಲಾವಣೆ ಮಾಡಿದ್ದಾನೆ.
ವಾಹನಗಳ ಬದಲಾವಣೆ ಮಾಡಿದ್ದಾನೆ.
ಇದ್ರಿಂದ ಪೊಲೀಸರಿಗೆ ಸ್ಯಾಂಟ್ರೋರವಿಯನ್ನ ಪತ್ತೆ ಹಚ್ಚಲಿಕ್ಕೆ ಕಷ್ಟ ಆಯ್ತು.ಅವನೊನ್ನ ಹಾರ್ಡ್ ಕ್ರಿಮಿನಲ್.ಹಳೆಯ ಕ್ರಿಮಿನಲ್.
ಅವನು ಜೈಲಿನಲ್ಲಿದ್ದ.
ಅವನಿಗೆ ಈ ಬೆಳವಣಿಗೆಗಳೆಲ್ಲಾ ಗೊತ್ತಿತ್ತು.ಪರಾರಿಯಾದ ನಂತರ ಗುರುತು ಬದಲಿಸಿಕೊಂಡಿದ್ದ.ಮೀಸೆ ಬೋಳಿಸಿ ವಿಗ್ ತೆಗೆದು ಹಾಕಿ ತಲೆಮರೆಸಿಕೊಂಡಿದ್ದ ಇಂದು ಆತನನ್ನ ಬಂಧಿಸಲಾಗಿದೆ.ವಿವಿಧ ಪೋಲಿಸ್ ತಂಡಗಳು ರಚಿಸಿ ಪತ್ತೆ ಮಾಡಲಾಗಿದೆ.ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶ್ಲಾಘಿಸುತ್ತೇನೆ ಎಂದರು.
ಜ.2ರಂದು ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸದಿರುವುದಕ್ಕೆ ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಭಟನೆಗಳೂ ನಡೆದಿದ್ದವು.
ವಿವಾಹಿತ ಎಂಬುದನ್ನು ಮುಚ್ಚಿಟ್ಟು, ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ ಮದುವೆಯಾಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ ನೀಡಿ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು.
ನಗರದ ಸಂತ್ರಸ್ತ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರು ಒಡನಾಡಿ ಸೇವಾ ಸಂಸ್ಥೆಯ ನೆರವು ಪಡೆದು ದೂರು ದಾಖಲಿಸಿದ್ದರು.
ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504 (ಕ್ರಿಮಿನಲ್ ಪಿತೂರಿ), 376 (ಅತ್ಯಾಚಾರ), 270 (ಪ್ರಾಣಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹಲ್ಲೆ), 498ಎ (ಕೌಟುಂಬಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಿಸಲಾಗಿತ್ತು.11ದಿನಗಳ ನಂತರ ಸ್ಯಾಂಟ್ರೋ ರವಿ ಬಂಧಿಸುವಲ್ಲಿ ಮೈಸೂರು ಪೋಲಿಸರು ಯಶಸ್ವಿಯಾಗಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.