
ನಂದಿನಿ ಮೈಸೂರು
ನವದೆಹಲಿ: ಗುಜರಾತ್ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಎನ್‌ಸಿಪಿಸಿಆರ್ ಕಾಂಗ್ರೆಸ್ ದೂರು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿಯೇ ಕುಳಿತುಕೊಂಡು ಬಾಲಕಿಯೊಬ್ಬಳು ಬಿಜೆಪಿ ಕುರಿತಂತೆ ಪದ್ಯವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಮಂಗಳವಾರ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಜೆಪಿ ಇದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು, ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ದೂರು ನೀಡಿದ್ದು, ಚುನಾವಣಾ ಆಯೋಗಕ್ಕೂ ದೂರಿನ ಪ್ರತಿ ಸಲ್ಲಿಸಲಾಗಿದೆ.
ಗುಜರಾತ್ ಚುನಾವಣೆಯಲ್ಲಿ ಪ್ರಚಾರದ ವೇಳೆ ಬಾಲಕಿಯೊಬ್ಬಳು ಬಿಜೆಪಿ ಅಭಿವೃದ್ಧಿ ಬಗ್ಗೆ ಗುಜರಾತಿಯಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಮೋದಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯನ್ನು ಪದ್ಯದ ಮೂಲಕ ಹೊಗಳುವುದನ್ನು ಕೇಳಿದ ಮೋದಿ ಕೊನೆಗೆ ಬಾಲಕಿಗೆ ಶಬಾಶ್ ಎಂದು ಮೆಚ್ಚುಗೆ ವಕಪಡಿಸಿದ್ದಾರೆ.
ಸುಮಾರು 57 ಸೆಕೆಂಡುಗಳಿರುವ ಈ ವೀಡಿಯೋದಲ್ಲಿ `ಬಿಜೆಪಿ, ಬಿಜೆಪಿ, ಬಿಜೆಪಿ, ಎಲ್ಲಿ ನೋಡಿದರೂ ಬಿಜೆಪಿ ಎಂದು ಹಾಡಿದ್ದು, ಬಿಜೆಪಿಯನ್ನು ಸೋಲಿಸಲು ಜನ ನಾನಾ ಆಟಗಳನ್ನು ಆಡುತ್ತಿದ್ದಾರೆ ಎಂದು ಗುಜರಾತಿ ಭಾಷೆಯಲ್ಲಿ ಬಾಲಕಿ ಪದ್ಯ ಹಾಡಲು ಶುರು ಮಾಡಿದ್ದಾಳೆ.