
ಹನೂರು : ತಾಲ್ಲೂಕಿನ ಕಾಡಂಚಿನ ಪೋನ್ನಾಚಿ ಅಸ್ತುರು, ಮರೂರು ಗ್ರಾಮಗಳಲ್ಲಿ ಪ್ರತಿದಿನ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ಹಾಳಾಗುತ್ತಿದ್ದು, ಈ ಭಾಗದ ರೈತರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಗ್ರಾಪಂ ಸದಸ್ಯ ಡಿ.ಕೆ.ರಾಜು ಹೇಳಿದ್ದಾರೆ.
ರಾಜು ಅವರ ಪೋನ್ನಾಚಿ ಗ್ರಾಮದ ಸರ್ವೆ ನಂ, 211ರಲ್ಲಿನ 6 ಎಕರೆ ಜಮೀನು ಸೇರಿದಂತೆ ಇತರೆ ರೈತರು ಬೆಳೆದಿರುವ ರಾಗಿ ಸಾಮೆ, ನವಣೆ ಬೆಳೆಯನ್ನು ದಿನನಿತ್ಯ ಕಾಡನೆಗಳು ಹಾಗೂ ಇತರೆ ಪ್ರಾಣಿಗಳು ಜಮೀನುಗಳಿಗೆ ನುಗ್ಗಿ ಫಸಲು ನಾಶಗೊಳಿಸುತ್ತಿವೆ. ಕಾಡನೆಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೋಲಾರ್ ತಂತಿಯನ್ನು ಅಳವಡಿಸಿದ್ದರೂ ಸಹ ಸೋಲಾರ್ ತಂತಿಯನ್ನು ಲೆಕ್ಕಿಸದೆ ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಯನ್ನು ನಾಶ ಪಡಿಸುತ್ತಿವೆ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟ ಮತ್ತು ಆತಂಕದಲ್ಲಿ ಬದುಕು ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಿ ಬೆಳೆಯನ್ನು ರಕ್ಷಿಸುವಂತೆ ಅವರು ಒತ್ತಾಯಿಸಿದ್ದಾರೆ.
ನಂದಿನಿ ಮೈಸೂರು