
ಚೆನ್ನೈ- ಮೈಸೂರು: ಅತಿವೇಗವಾಗಿ ಸಂಚರಿಸುವ ದಕ್ಷಿಣ ಭಾರತದ ಮೊದಲ ರೈಲು : ಪ್ರಧಾನಿ ನರೇಂದ್ರ ಮೋದಿ.

ವಂದೇ ಭಾರತ್ ರೈಲಿನ ವಿಶೇಷತೆಗಳೇನು ಎಂಬುವುದನ್ನ ನೋಡೊದಾದ್ರೆ . ಚೆನ್ನೈ – ಮೈಸೂರು ನಡುವೆ ವಂದೇ ಭಾರತ್ ರೈಲಿನ ಸಂಚಾರ.
ಚೆನ್ನೈ- ಮೈಸೂರು ಮಾರ್ಗದಲ್ಲಿ ಸಂಚರಿಸುವಾಗ ಬೆಂಗಳೂರಿನ ಕೆಎಸ್ಆರ್ ನಲ್ಲಿ ಮಾತ್ರ ನಿಲುಗಡೆ. ಅತಿವೇಗವಾಗಿ ಸಂಚರಿಸುವ ದಕ್ಷಿಣ ಭಾರತದ ಮೊದಲ ರೈಲು. ಒಟ್ಟು 504 ಕಿಲೋಮೀಟರ್ ದೂರವನ್ನ 6 ಗಂಟೆಯ ಅವಧಿಯಲ್ಲಿ ಕ್ರಮಿಸಲಿರುವ ಟ್ರೈನ್.
ಬುಧವಾರ ಹೊರತು ಪಡಿಸಿ ವಾರದ ಆರು ದಿನಗಳಲ್ಲೂ ರೈಲು ಸಂಚಾರ. 16 ಬೋಗಿಗಳನ್ನು ಹೊಂದಿದ್ದು ಸುಮಾರು 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ.
ರೈಲಿನಲ್ಲಿರುವ ಆಸನಗಳು 360 ಡಿಗ್ರಿ ತಿರುಗುತ್ತವೆ. ರೈಲಿನಲ್ಲಿ ಸಂಪೂರ್ಣ ಏಸಿ ವ್ಯವಸ್ಥೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ರೈಲಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ಚಲಿಸುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬಾಯ್ ಬಾಯ್ ಮಾಡಿದ ಪ್ರಧಾನಿ ಮೋದಿ. ವಂದೇ ಭಾರತ್ ರೈಲಿನ ವೇಳಾಪಟ್ಟಿ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ.
359 ಕಿಲೋಮೀಟರ್ ಗಳನ್ನು ಕ್ರಮಿಸಿ ಬೆಳಿಗ್ಗೆ 10:25 ಕ್ಕೆ ಬೆಂಗಳೂರು ನಗರ ಜಂಕ್ಷನ್ ಗೆ ಆಗಮಿಸುತ್ತದೆ.ಬೆಂಗಳೂರಿನ ಕೆಎಸ್ಆರ್ ನಲ್ಲಿ ಐದು ನಿಮಿಗಳ ಕಾಲ ನಿಂತು ಬೆಳಿಗ್ಗೆ 10:30 ಗಂಟೆಗೆ ಮೈಸೂರಿಗೆ ಹೊರಡುತ್ತದೆ.
ನಂತರ 137.6 ಕಿಲೋಮೀಟರ್ ದೂರ ಕ್ರಮಿಸಿ ಮಧ್ಯಾಹ್ನ 12.30 ಕ್ಕೆ ಮೈಸೂರು ಜಂಕ್ಷನ್‌ಗೆ ತಲುಪುತ್ತದೆ. ಇದೇ ರೈಲು ಮೈಸೂರಿನಿಂದ ವಾಪಸ್ ಮಧ್ಯಾಹ್ನ 1:05ಕ್ಕೆ ಹೊರಟು 2:55ಕ್ಕೆ ಬೆಂಗಳೂರು ತಲುಪುತ್ತದೆ.
ಐದು ನಿಮಿಷಗಳ ನಂತರ, ಅಂದರೆ ಮಧ್ಯಾಹ್ನ 3:00 ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 7:35ಕ್ಕೆ ತಲುಪುತ್ತದೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.