“ಮೈಸೂರಿನಲ್ಲಿ 16 ಕೋಟಿ ವೆಚ್ಚದ ಪೊಲೀಸ್ ತರಬೇತಿ ಶಾಲೆ ಲೋಕಾರ್ಪಣೆ : ಗೃಹ ಸಚಿವ ಅರಗ ಜ್ಞಾನೇಂದ್ರ”

ಮೈಸೂರು: ಮೈಸೂರಿನಲ್ಲಿ 16 ಕೋಟಿ ವೆಚ್ಚದ ಪೊಲೀಸ್ ತರಬೇತಿ ಶಾಲೆ ಲೋಕಾರ್ಪಣೆ : ಗೃಹ ಸಚಿವ ಅರಗ ಜ್ಞಾನೇಂದ್ರ.

ಇಂದು ಮೈಸೂರಿನಲ್ಲಿ ಪೊಲೀಸ್ ತರಬೇತಿ ಶಾಲೆ ಮತ್ತು ನೂತನ ಆಡಳಿತ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ರವರು ಲೋಕಾರ್ಪಣೆಗೊಳಿಸಿದರು ಈ ಸಂದರ್ಭದಲ್ಲಿ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು

ಆನ್ ಲೈನ್ ಆಫ್ ಐ ಆರ್ ಜಾರಿಗೆ ತರಲಾಗಿದ್ದು ಇ ಬೀಟ್ ಸಿಸ್ಟಮ್ ಮೂಲಕ ಮೊಬೈಲ್ ನಂಬರ್ ಗೆ ಎಸ್ ಎಂ ಎಸ್ ಕಳುಹಿಸಿದರೆ ಪೊಲೀಸ್ ಇಲಾಖೆ ನಿಮಗೆ ಸಹಾಯ ಮಾಡಲಿದೆ

ಹರಿಯಾಣದಲ್ಲಿ ಎರಡನೇ ಉನ್ನತ ಮಟ್ಟದ ಅಧಿಕಾರಿಗಳ ಸಮಾವೇಶದಲ್ಲಿ ನಮ್ಮ ದೇಶದ ಗೃಹಸಚಿವರು ರಾಜ್ಯದ ಪೊಲೀಸ್ ಇಲಾಖೆಗೆ ಅಭಿನಂದನೆ ಮಾತುಗಳನ್ನ ನುಡಿದರು ಉತ್ತಮ ತರಬೇತಿಗೆ ಕರ್ನಾಟಕದಲ್ಲಿ ನಡೆಸಬೇಕು ಎಂದರು

ಇಂದು ಹಲವು ಕಟ್ಟಡಗಳು ಹಾಗೂ 16 ಕೋಟಿ ರೂಪಾಯಿ ವೆಚ್ಚದಲ್ಲಿ ಪೊಲೀಸ್ ತರಬೇತಿ ಶಾಲೆ ಉದ್ಘಾಟನೆ ಮಾಡಲಾಗಿದೆ ಒಂದೇ ವರ್ಷದಲ್ಲಿ 200 ಕೋಟಿ ವೆಚ್ಚದಲ್ಲಿ ಸುಮಾರು 117 ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ

ಪೊಲೀಸ್ ಇಲಾಖೆಗೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತಿದೆ ನಮಗೆ ಸವಾಲಿನ ಕೆಲಸ ಅಂದರೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದೆ ಹಾಗಾಗಿ ಸೈಬರ್ ಕ್ರೈಮ್ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಶೇಷ ತರಬೇತಿ ಪಡೆದುಕೊಳ್ಳಬೇಕು ಕಾನ್ಸ್ಟೇಬಲ್ ಗಳಿಗೆ ಎಲ್ಲವೂ ಸಾಧ್ಯ ದೊಡ್ಡ ದೊಡ್ಡ ಪ್ರಕರಣ ದಲ್ಲಿ ಕಾನ್ಸ್ಟೇಬಲ್ ಪತ್ರ ಪ್ರಮುಖವಾಗಿರುತ್ತದೆ

ಹಿಂದೆ ಪೊಲೀಸ್ ಇಲಾಖೆಗೆ ಮಹಿಳೆಯರು ಸೇರುತ್ತಿರಲಿಲ್ಲ ಆದರೆ ಈಗ ಎಲ್ಲ ವಿಭಾಗದಲ್ಲಿ ಮಹಿಳಾ ಪೊಲೀಸ್ ಇದ್ದರೆ ಇದು ಸಂತಸ ತಂದಿದೆ ಕಷ್ಟ ಪಟ್ಟು ಪರಿಶ್ರಮದಿಂದ ಕೆಲಸ ಮಾಡಿ ಪೊಲೀಸ್ ಇಲಾಖೆ ಗೆ ಒಳ್ಳೆಯ ಹೆಸರು ಕೊಡಬೇಕು

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ, ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *