“ಕೋಟಿ ಕೋಟಿ ದುಡ್ಡು ಒಡೆಯುವ ಕುಂಭಮೇಳ :ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಗಂಭೀರ ಆರೋಪ”

ಮಂಡ್ಯ: ಕೋಟಿ ಕೋಟಿ ದುಡ್ಡು ಒಡೆಯುವ ಕುಂಭಮೇಳ ವಾಗಿದೆ ಎಂದು,ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಗಂಭೀರ ಆರೋಪಸಿದರು.

ಕೆ ಆರ್ ಪೇಟೆ ಪಟ್ಟಣದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು ಎಚ್ ಟಿ ಮಂಜು ರವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್ ಟಿ ಮಂಜು ರವರು , ಕುಂಭಮೇಳವನ್ನು ಜೆಡಿಎಸ್ ಪಕ್ಷ ವಿರೋಧಿಸಲ್ಲ.

ಕುಂಭಮೇಳ ಹೆಸರಿನಲ್ಲಿ ಕೋಟಿ ಕೋಟಿ ದುಡ್ಡು ಒಡೆಯುವ ಕಾರ್ಯಕ್ರಮಕ್ಕೆ ನಮ್ಮ ಆಕ್ರೋಶವಿದೆ.ಸಚಿವರ ಸ್ಚಾರ್ಥಕ್ಕಾಗಿ ಬಳಸಿ ಕೊಳ್ಳೋಕೆ ಮಹಾಕುಂಭಮೇಳ ಕಾರ್ಯಕ್ರಮ ವೇದಿಕೆ ಆಗಿದೆ.ಕುಂಭಮೇಳಕ್ಕಾಗಿ ಜಿಲ್ಲಾಡಳಿತ ಒಂದು ತಿಂಗಳಿಂದ ಜನಸಾಮಾನ್ಯರ ಕೈಗೆ ಸಿಗದೆ ಕುಂಭಮೇಳದಲ್ಲಿ ತಲ್ಲೀನರಾಗಿದ್ದಾರೆ.

ಪೊಲೀಸರಿಗೆ ಊಟ ಮಾಡದಂತೆ ಹೇಳಿರುವ ಸಚಿವನ ವಿರುದ್ಧ ಅಸಮಾಧಾನ ವಿದೆ ಧಾರ್ಮಿಕತೆ ಪ್ರಸಾದವನ್ನು ಸೇವಿಸಲು ಪೊಲೀಸರಿಗೆ ಬಿಡದ ಸಚಿವ ಅಧಿಕಾರದ ಮದ ಹೆಚ್ಚಾಗಿದೆ.ಸಚಿವರ ಮಾತಿನಿಂದ ಬೇಸರಗೊಂಡ ಎಸ್‌ಪಿ, ಪೊಲೀಸರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ಅಧಿಕಾರದ ಮದದಿಂದ ನಿಕೃಷ್ಠವಾಗಿ ಮಾತಾಡೋದು ಸರಿಯಲ್ಲ.

ಪೊಲೀಸರ ಬಳಕೆ ಮಾಡಿಕೊಂಡು ಹಿಂದೆ ರಾಜಕಾರಣ ಮಾಡಿರೋದನ್ನ ಸಚಿವ ಮರೆಯಬಾರದು.ಮೂರುದಿನ ಪಟ್ಟಣದ ಲೈಟಿಂಗ್‌ನಿಂದ ಪಟ್ಟಣದ ಜನರ ಸಮಸ್ಯೆ ಬಗೆಹರಿಯುವುದಿಲ್ಲ.ಪಟ್ಟಣದ ಯುಜಿಡಿ ಅಲ್ಲಲ್ಲೇ ಬಾಯಿತೆರದುಕೊಂಡಿವೆ.ನೀವೇ ಪೌರಾಡಳಿತ ಮಂತ್ರಿಯಾಗಿದ್ದರೂ ಯುಜಿಡಿ ಕಾಮಗಾರಿ ಮುಕ್ತಾಯಗೊಂಡಿಲ್ಲ.

ಬಸ್ ನಿಲ್ದಾಣದಲ್ಲಿ ನೀರು ನಿಲ್ಲುತ್ತಿರುವುದನ್ನ ಸರಿಪಡಿಸಿಲ್ಲ ಡಿ ಸಿ ನಿಲ್ದಾಣಕ್ಕೂ ಹೋಗಿ ಬಂದರೂ ಪ್ರಯೋಜನವಾಗಿಲ್ಲ,ಎಂದು ಗಂಭೀರವಾಗಿ ಆರೋಪಿಸಿ ಕಿಡಿಕಾರಿ,ಕುಂಭ ಮೇಳಕ್ಕೆ ಕಾರ್ಯಕ್ರಮಕ್ಕೆ ಎಂದು ಆಗಮಿಸಿದ ವೆಂಕಟಾಚಲಶೆಟ್ಟಿ ರವರು ಹೃದಯಾಘಾತದಿಂದ ಮೃತಪಟ್ಟರೆ,ಸಾಕ್ಷಿಬಿಡು ಗ್ರಾಮದ ಸುಶೀಲಮ್ಮ ರವರು ಸೋಮನಹಳ್ಳಿ ರಸ್ತೆ ಮಾರ್ಗದಲ್ಲಿ ಬಸ್ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎರಡು ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್,ನಾಗೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಸಂತೆಬಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ, ಶೆಟ್ಟನಾಯಕನ ಕೊಪ್ಪಲು ಶೇಖರ್, ಪ್ರತಾಪ್,ಸೇರಿದಂತೆ ಉಪಸ್ಥಿತರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *