ನವದೆಹಲಿ: ಕೆನಡಾದ ಹ್ಯಾಲಿ ಫ್ಯಾಕ್ಸ್ ನಲ್ಲಿನಡೆಯುತ್ತಿರುವ 65ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾರತೀಯ ಸಂಸದೀಯ ನಿಯೋಗವನ್ನು ಮುನ್ನಡೆಸುತ್ತಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿನ್ನೆ ನೆದರ್ಲ್ಯಾಂಡ್ಗೆ ಆಗಮಿಸಿದ್ದಾರೆ.
ಆಗಮನದ ನಂತರ, ಬಿರ್ಲಾ ಅವರು ನೆದರ್ಲ್ಯಾಂಡ್ಸ್ ನ ಸೆನೆಟ ಅಧ್ಯಕ್ಷ ಪ್ರೊಫೆಸರ್ ಜಾನ್ ಅಂಥೋನಿ ಬ್ರೂಯಿಜ್ನ್ ಅವರನ್ನು ಭೇಟಿ ಮಾಡಿದ್ದರು. ಸಭೆಯಲ್ಲಿ ಉಭಯ ನಾಯಕರು ಸಂಸದೀಯ ಸಹಕಾರವನ್ನು ಹೆಚ್ಚಿಸುವ ಮತ್ತು ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಮತ್ತು ಪರಸ್ಪರ ಆಸಕ್ತಿಯ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಓಂ ಬಿರ್ಲಾ ಅವರು ಸುರಿನಾಮಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದು ಭಾರತ ಮತ್ತು ನೆದರ್ಲ್ಯಾಂಡ್ಸ್ ಬಲವಾದ ರಾಜಕೀಯ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿವೆ, ಭಾರತೀಯ ಸಮುದಾಯದ ಕೊಡುಗೆಗಳು ಅನನ್ಯ ತಮ್ಮ ಸಮರ್ಪಣೆ ಪರಿಣತಿ ಮತ್ತು ವೃತ್ತಿಪರತೆಯ ಮೂಲಕ ಆರ್ಥಿಕತೆ ಮತ್ತು ಸಮಾಜವನ್ನು ಭಾರತೀಯ ಸಮುದಾಯ ಬಲಪಡಿಸುತ್ತದೆ, ಎಂದು ಹೇಳಿದರು .
ನಂತರ ಇಂಡಿಯಾ ಹೌಸ್ ನಲ್ಲಿ ಭಾರತೀಯ ರಾಯಭಾರಿ ಕಚೇರಿ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಬಿರ್ಲಾ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನಗಳನ್ನು ಎತ್ತಿ ತೋರಿಸಿದರು .
ಭಾರತದ ಬೆಳವಣಿಗೆಯ ಕಥೆಯ ಲಾಂಛನವನ್ನು ಪಡೆಯಲು ಅವರು ಭಾರತೀಯ ವಲಸೆಗಾರರನ್ನು ಒತ್ತಾಯಿಸಿದರು.
ಇದಕ್ಕೂ ಮುನ್ನ ಅವರು ಹೇಗ್ ನಲ್ಲಿರುವ ಸೇವಾಧಾಮ ಹಿಂದೂ ಕೇಂದ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 65ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನವು ಕೆನಡಾದ ಹ್ಯಾರಿಫಾಕ್ಸ್ ನಲ್ಲಿ ಇದೇ ತಿಂಗಳು 20 ರಿಂದ 26ರ ವರೆಗೆ ನಡೆಯುತ್ತದೆ ಎಂದರು.
ವರದಿ: ಸಿಂಚನಾ ಜಯಂತ್ ಬಲೇಗರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555