
ಸಾಗರ: ಸಾಗರದಲ್ಲೋಂದು ಅರ್ಥಪೂರ್ಣವಾದ ಶಿವಸಂಭ್ರಮ ಕಾರ್ಯಕ್ರಮ – ಜಾನಪದ ಪರಿಷತ್ತು ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ

ಸೃಷ್ಟಿಯಲ್ಲಿ ಶಿವನಿಗೆ ವಿಶೇಷ ವಾದ ಸ್ಥಾನ ಇದೆ ಎಂದು ಕೆಳದಿ ಬಂದಗದ್ದೆ ಮಠದ ಡಾ.ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಹೇಳಿದರು. ಅವರು ಇಲ್ಲಿನ ಅಜಿತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಾಗರ ಇವರು ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಶಿವಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಭಾರತೀಯ ಪರಂಪರೆಗೆ ಜಗತ್ತಿನಲ್ಲಿಯೇ ವಿಶೇಷವಾದ ಸ್ಥಾನವಿದೆ ಪ್ರಾಚೀನ ಕಾಲದಿಂದಲೂ ಆರಾಧನೆಗಳನ್ನು ಅನುಸರಿಸುತ್ತಾ ಬಂದಿದ್ದು ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಒಯ್ಯುವ ಕೆಲಸ ಆಗಬೇಕಾಗಿದೆ ಸ್ವಾರ್ಥವನ್ನು ಮರೆತು ಭಾರತೀಯ ಧರ್ಮ ವನ್ನು ಉಳಿಸಿಕೊಂಡು ಹೋಗಬೇಕು ಸಾಗರದಲ್ಲಿ ವಿನೂತನವಾದ ಕಾರ್ಯಕ್ರಮ ಇದಾಗಿದೆ ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ ಮುಂದಿನ ದಿನಗಳಲ್ಲಿ ಶಿವಸಂಭ್ರಮ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷವಾಗಿ ಆಚರಿಸೋಣ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವೀನಿಕುಮಾರ ಮಾತನಾಡಿ ಭಾರತೀಯ ಸನಾತನ ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕು, ಸರ್ವಧರ್ಮಗಳ ಸಮನ್ವಯ ನಮ್ಮ ದೇಶದ ಆಚರಣೆಯಾಗಿದೆ ಎಂದವರು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ.ಟಿ.ಸ್ವಾಮಿ ಮಾತನಾಡಿ ದೇವರುಗಳನ್ನು ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ನೋಡಿದರೆ ಮಾತ್ರ ದೇವರ ಸ್ವರೂಪ ಅರ್ಥವಾಗುತ್ತದೆ, ವಿಶ್ವದಲ್ಲಿ ಶಾಂತಿ ನೆಲೆಸಲು ಮನಸು ಮನಸುಗಳನ್ನು ಕಟ್ಟಬೇಕಾಗಿದೆ ಸಾಂಸ್ಕೃತಿಕ ಮನಸ್ಸುಗಳಿಂದ ಮಾತ್ರ ಸಾಮಾಜಿಕ ಸಾಮರಸ್ಯವನ್ನು ಉಂಟು ಮಾಡಲು ಸಾಧ್ಯ ಸಂಘಟನೆಗಳು ಒಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು ಶಿವ ಸಂಭ್ರಮ ಎನ್ನುವುದು ವಿಶೇಷ ಪರಿಕಲ್ಪನೆಯಾಗಿದೆ ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಎಲ್ಲಾರ ಸಹಕಾರದಿಂದ ನಡೆಸೋಣ ಎಂದರು.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.
ಜಾನಪದ ಪರಿಷತ್ತು ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಉಮೇಶ್ ಹಿರೇನೆಲ್ಲೂರು, ಪ್ರಮುಖರಾದ ಹುಚ್ಚರಾಯಪ್ಪ, ಮಾಲತೇಶ್, ಬಿ.ಡಿ.ರವಿಕುಮಾರ್, ರಘು ಎಸ್ ರಾಯಲ್ ಬಿಲ್ಡರ್ಸ್ ನಾ ಮಹೇಶ್, ರಾಜೇಂದ್ರ ಆವಿನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಜಾನಪದ ಕಲಾ ತಂಡದ ಸದಸ್ಯರು ಪ್ರಾರ್ಥಿಸಿದರು, ಸತೀಶ್ ಸ್ವಾಗತಿಸಿ ಮಂಜಪ್ಪ ವಂದಿಸಿ ಪರಮೇಶ್ವರ ಕರೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ಜಾನಪದ ಪರಿಷತ್ತು ಕಲಾ ತಂಡ, ಕಲಾ ಸಿಂಚನ, ಜಾನಪದ ಕಲಾ ತಂಡ.ದೈವಜ್ಞ, ಮಹಿಳಾ ಭಜನಾ ಮಂಡಳಿ, ಜೈ ಗುರುದೇವ ಯೋಗ ಕೇಂದ್ರ, ದೈವಜ್ಞ ಮಹಿಳಾ ಚಂಡೆ ವಾದನ ತಂಡ, ಹವ್ಯಕ ಶ್ರದ್ದಾ ಭಜನಾ ಮಂಡಳಿ, ವೀರ ಮಾರುತಿ ಭಜನಾ ಮಂಡಳಿ, ಜಿ.ಎಸ್.ಬಿ ಮಹಿಳಾ ಭಜನಾ ಮಂಡಳಿ, ಮಹಾಗಣಪತಿ ಭಜನಾ ಮಂಡಳಿ, ತೇಜಶ್ರೀ ಕಲಾ ತಂಡ, ಕು.ಪೂಜಾ ಮೊದಲಾದವರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಶಿವ ಸಂಭ್ರಮ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 9880432555.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 9880432555.