”ಶಾಕಿಂಗ್ ನ್ಯೂಸ್” ಕೊಳಕು ನೀರನ್ನು ಕುಡಿಸುತ್ತಿರುವ ಸಾಗರ ನಗರಸಭೆ

ಸಾಗರ: ‘‘ಶಾಕಿಂಗ್ ನ್ಯೂಸ್” ಕೊಳಕು ನೀರನ್ನು ಕುಡಿಸುತ್ತಿರುವ ಸಾಗರ ನಗರಸಭೆ.



ಸಾಗರ ಪಟ್ಟಣದ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾದ ವರದಾ ನದಿ ಅಣೆಕಟ್ಟೆ ಯಿಂದ ಸರಬರಾಜಾಗುವ ನೀರು ಕುಡಿಯಲು ಯೋಗ್ಯವೇ? ಎಂದು ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ ಏಕೆಂದರೆ ವರದಾನದಿಯ ಅಣೆಕಟ್ಟಿನ ಸಮೀಪ ಸಾಗರ ನಗರದ ವಿಜಯನಗರ ಜಂಬಗಾರು ಬೆಳಲಮಕ್ಕಿ ಭಾಗದ ಕೊಳಕು ಚರಂಡಿ ನೀರು ಸರಾಗವಾಗಿ ಹರಿದು ಬಂದು ನೇರವಾಗಿ ಕುಡಿಯುವ ನೀರಿನ ಯೋಜನೆಗೆ ಸೇರುತ್ತಿದೆ ಇದು ಅನೇಕ ವರ್ಷಗಳಿಂದಲೂ ಇದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳು ಮತ್ತು ನಗರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಕಣ್ಣಿದ್ದು ಕುರುಡರಂತೆ ಆಗಿದ್ದಾರೆ ಈ ಒಳ್ಳೆಯ ಯೋಜನೆಗೆ ಬೆಳಲಮಕ್ಕಿ, ಜಂಬಗಾರು, ಮರಸ ಈ ಭಾಗದ ಅನೇಕ ರೈತರು ಭೂಮಿಯನ್ನು ನೀಡಿ ಸಾಗರದ ಜನತೆಗೆ ಕುಡಿಯುವ ನೀರಿನ ಯೋಜನೆಯಲ್ಲಿ ಸಹಕಾರಿಯಾಗಿದ್ದಾರೆ ಆದರೆ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ ಪ್ರಮಾಣದಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟವಾದ ನಿರ್ದಶನ.

ಈಗಾಗಲೇ ಶರಾವತಿ ಹಿನ್ನೀರಿನಿಂದ ನೀರು ತಂದು ಸಾಗರದ ವಿವಿಧ ಭಾಗಗಳಲ್ಲಿ ನೀರು ಸರಬರಾಜಾಗುತ್ತಿದೆ ಆದರೆ ಸಾಗರದ ವರದಾನದಿಯ ಅಣೆಕಟ್ಟಿನಿಂದ ಬಹುತೇಕ ವಾರ್ಡ್ ಗಳಿಗೆ ಇಲ್ಲಿಂದಲೇ ನೀರು ಸರಬರಾಜಾಗುತ್ತಿದೆ ಜನರು ಕುಡಿಯುವ ನೀರು ಅಕಸ್ಮಾತಾಗಿ ಇಲ್ಲಿ ಬಂದು ನೋಡಿದರೆ ಅವರಿಗೆ ಅರಿವಾಗುತ್ತಿದೆ ನಾವು ಕುಡಿಯುವ ನೀರು ಸ್ವಚ್ಛವಾದ ನೀರಲ್ಲ ಇದು ಗಲೀಜು ನೀರು ಎಂದು! ಎಂದು ತಕ್ಷಣದಲ್ಲಿ ಈ ವ್ಯವಸ್ಥೆ ಸರಿಯಾಗದಿದ್ದರೆ ಇಲ್ಲಿಯ ನಾಗರಿಕರು ಉಗ್ರವಾದ ಹೋರಾಟಕ್ಕೆ ಅಣಿಯಾಗಿದ್ದಾರೆ ಇನ್ನಾದ್ರೂ ಸಾಗರ ನಗರಸಭೆ ತಕ್ಷಣ ಇದಕ್ಕೊಂದು ಕಾಯಕಲ್ಪ ಕಲ್ಪಿಸಿ ಸ್ವಚ್ಚವಾದ ನೀರನ್ನು ಸರಬರಾಜು ಮಾಡಲು ಆಗ್ರಹಿಸಿದ್ದಾರೆ.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.

ಮಾಹಿತಿ: ಧರ್ಮರಾಜ್.

ವರದಿಸಿಸಿಲ್ ಸೋಮನ್

Leave a Reply

Your email address will not be published. Required fields are marked *