ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕರುಗಳು: ಕೊಲೆಗೈದವರನ್ನು ಮರಣದಂಡನೆಗೆ ಗುರಿಪಡಿಸಿ ಎಂದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು !!!

ಶಿವಮೊಗ್ಗ: ಕಳೆದ ವಾರ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ನಂತರ ಮಾತನಾಡಿದ ಅವರು ಕೊಲೆ ಮಾಡುವಂತಹ ವ್ಯಕ್ತಿಗಳು ಯಾವುದೇ ಜಾತಿ ಧರ್ಮ  ಅಂಥವರಿಗೆ ಶಿಕ್ಷೆಯನ್ನು ನೀಡಬೇಕು.

ಪ್ರತಿಯೊಬ್ಬರ ಜೀವಕ್ಕೂ ಬೆಲೆಯಿದೆ.ಅವರ ಅಕ್ಕ ಹಾಗೂ ತಂಗಿ ಮತ್ತು ತಾಯಿಯ ನೋವು ನಿಜಕ್ಕೂ ಮನ ಕಲಕುವಂತಿದೆ.ಇಂತಹ ಘಟನೆಗಳು ಮರುಕಳಿಸಬಾರದು ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ  ಕ್ರಮ ವಹಿಸಬೇಕು.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.

ಈ ಘಟನೆಯಿಂದ ಹೋಟೆಲ್ ಮಾಲೀಕರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಸಹ ಸಾಕಷ್ಟು ತೊಂದರೆಯಾಗುತ್ತಿದೆ.ರಕ್ಷಣಾ ಇಲಾಖೆ ಗಮನ ಹರಿಸಿ ಎಲ್ಲರಿಗೂ ರಕ್ಷಣೆ ನೀಡಲು ಮನವಿ ಮಾಡಿದರು.

ಇಂತಹ ಕೆಟ್ಟ ನೀಚ ಮನಸ್ಸಿನ ಕೊಲೆಗಾರರನ್ನು ಸರ್ಕಾರ ಬಿಡಬಾರದು ಈಗಿನ ಬಿಜೆಪಿ ಸರ್ಕಾರ ಇದೆ ಅವರು ಯಾವ ರೀತಿ ಕ್ರಮ ಕೈಗೊಂಡರು ಒಳ್ಳೆಯದು ಇಂತಹ ಕೊಲೆಗಡುಕರನ್ನು ಮರಣದಂಡನೆಗೆ ಗುರಿಪಡಿಸಿ ಎಂದು ಬೇಳೂರು  ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 9880432555.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 9880432555.

Leave a Reply

Your email address will not be published. Required fields are marked *