
ಏ. 1ಕ್ಕೆ 18 ವರ್ಷ ತುಂಬಿದವರಿಗೆ ಮತದಾನಕ್ಕೆ ಅವಕಾಶ
ನವದೆಹಲಿ: ಏ. 1ಕ್ಕೆ 18 ವರ್ಷ ತುಂಬಿದವರಿಗೆ ಮತದಾನಕ್ಕೆ ಅವಕಾಶ ಹಾಗೂ
85ವರ್ಷ ದಾಟಿದ ಮತದಾರರಿಗೆ ಮನೆಯಿಂದಲೇ ಮತದಾನ ಕ್ಕೆ ಅವಕಾಶ ಕಲ್ಪಸಲಾಗಿದೆ.ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ
ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ತಿಳಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 85ವರ್ಷ ದಾಟಿದ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಸಲಾಗಿದೆ ಎಂದರು.
ಈ ಬಾರಿ 97 ಕೋಟಿ ಮತದಾರರಿದ್ದು ಇದರಲ್ಲಿ 49 ಕೋಟಿ ಪುರುಷರು, 47.15 ಕೋಟಿ ಮಹಿಳಾ ಮತದಾರರಿದ್ದಾರೆ. 18-19 ವರ್ಷದೊಳಗಿನವರು ಒಟ್ಟಿ 1.82 ಕೋಟಿ ಮತದಾರರಿದ್ದು ಅದರಲ್ಲಿ 85 ಲಕ್ಷ ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 1.98 ಕೋಟಿ ಮತದಾರರು. 88 ಲಕ್ಷ ವಿಶೇಷಚೇತನರು, 2.18 ಶತಾಯುಷಿ ಮತದಾರರಿದ್ದಾರೆ. ತೃತೀಯ ಲಿಂಗಿಯರು 48 ಸಾವಿರ ಜನರಿದ್ದಾರೆ.
10.5 ಲಕ್ಷ ಮತಗಟ್ಟೆಗಳಲ್ಲಿ 55 ಲಕ್ಷ ಇವಿಎಂ ಬಳಕೆ ಮಾಡಲಾಗುತ್ತಿದೆ. ಒಟ್ಟು 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.2100 ವೀಕ್ಷಕರ ನೇಮಕ. 543 ಲೋಕಸಭಾ ಕ್ಷೇತ್ರದಲ್ಲಿ 7 ಹಂತಗಳಲ್ಲಿ ಲೋಕಸಭಾ ಚುನಾವಣಾ ನಡೆಯಲ್ಲಿದೆ.

ಇಂದಿನಿಂದ ಚುನಾವಣಾ ನೀತಿ ಸಂಹಿತೆ ಜಾರಿ. ಏ.19ರಂದು ಮೊದಲ ಹಂತದ ಮತದಾನ. ಏ.26 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೂರನೇ ಹಂತ ಮೇ.7 ಮೇ.13 4ನೇ ಹಂತ ಮೇ.20 5ನೇ ಹಂತ ಮೇ.25 6ನೇ ಹಂತ ಜೂನ್ 1 ಏಳನೇ ಹಂತ ಜೂನ್ 4 ಲೋಕಸಭಾ ಫಲಿತಾಂಶ ಪ್ರಕಟ. ಕರ್ನಾಟಕದಲ್ಲಿ 26 ಕ್ಷೇತ್ರದಲ್ಲಿ ಉಪಚುನಾವಣೆ. ಪ್ರಚೋಧನಾಕಾರಿ ಭಾಷಣ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು.
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555