
ಕಾರ್ಗಲ್ ಸಾಹಕರ ಸಂಘ ಕಳ್ಳತನ ಐವತ್ತು ಸಾವಿರ ರೂ ವಶಕ್ಕೆ ಪಡೆದ ಕಾರ್ಗಲ್ ಪೊಲೀಸರು
ಸಾಗರ:ತಾಲೂಕಿನ ಕಾರ್ಗಲ್ ಠಾಣಾ ವ್ಯಾಪ್ತಿಯ ವ್ಯಾಕೋಡಿ ಸಹಕಾರ ಸಂಘ ಹಾಗೂ ಹಾಲೆಮನೆ ಜೈನ ಬಸದಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 50 ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ. ಈತ ನೊಂದಿಗೆ ಇರುವ ಪ್ರಮುಖ ರೂವಾರಿ ಸೇರಿದಂತೆ ನಾಲ್ಕೈದು ಜನರಿಗೆ ತೀವ್ರ ಶೋಧ ನಡೆದಿದೆ. ಪೊಲೀಸರ ತಂಡ ಜನವರಿ 4ರಂದು ಮಂಗಳೂರಿನ ಮನೆಯೊಂದರಲ್ಲಿ ಅಡಗಿದ್ದ ಮಂಗಳೂರು ಮೂಲಕ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಹಿತ ನೊಂದಿಗೆ ಇನ್ನು ನಾಲ್ಕೈದು ಜನರ ತಂಡ ಇದ್ದು ಅವರೆಲ್ಲರೂ ಸೇರಿ ಹಲವು ದುಷ್ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಡಿ 16ರಂದು ಸಸಿಕೊಳ್ಳಿಯ ಶ್ರೀ ನಾರಾಯಣ ಗುರು ಸಹಕಾರ ಸಂಘದಲ್ಲಿ ಸುಮಾರು 1.70ಲಕ್ಷ ರೂ. ನಗದು ಹಾಗೂ ಡಿ.29ರಂದು ಹಾಲೆಮನೆ ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ನಗದು, 20 ಗ್ರಾಂ ಬಂಗಾರ 1.5ಕೆಜಿ ಬೆಳ್ಳಿ ವಸ್ತುಗಳು ಕಳುವಾಗಿತ್ತು. ಉಪವಿಭಾಗ ಪೊಲೀಸ್ ಉಪಾಧ್ಯಕ್ಷಕ ಗೋಪಾಲಕೃಷ್ಣ ಟಿ. ನಾಯಕ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನೀರಿಗೆ ಮಹಾಬಲೇಶ್ವರ ನಾಯಕ್ ಮತ್ತು ಕಾರ್ಗಲ್ ಠಾಣೆಯ ಪಿಎ ಸ್ಐ ಹಳಬಸಪ್ಪ ಹೋಳಿ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಸನಾವುಲ್ಲ, ಜಯೇಂದ್ರ, ಮಂಜುನಾಥ ನಾಯಕ್, ಲೋಕೇಶ್, ಶರತ್ ಕುಮಾರ್, ಪುರುಷೋತ್ತಮ್ ಹಾಗೂ ತಾಂತ್ರಿಕ ಸಿಬ್ಬಂದಿ ವಿನಯ್ ಮತ್ತು ಇಂದ್ರೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555