
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮಳೆಯಲ್ಲೇ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ಮಳೆಯ ಸಿಂಚನದ ನಡುವೆಯೇ ಮೊದಲಿಗೆ ಅಭಿಮನ್ಯು ಬೆನ್ನಿಗೆ ಮರಳಿನ ಮೂಟೆ ಕಟ್ಟಲಾಯಿತು.ಬಾರೀ ಮಳೆಯ ನಡುವೆಯೂ ಪುರೋಹಿತರು ಆನೆಗಳಿಗೆ ಪೂಜೆ ಸಲ್ಲಿಸಿದರು.ನಂತರ ಅಭಿಮನ್ಯು ಹೊತ್ತಿದ್ದ ಮರಳಿನ ಮೂಟೆಗೆ ಮರದ ಅಂಬಾರಿ ಕಟ್ಟಲಾಯಿತು. ಮಾವುತರು ಹಾಗೂ ಕಾವಾಡಿಗಳು ರೈನ್ ಕೋಟ್ ಧರಿಸಿ ರಾಜಮಾರ್ಗದ ಮೂಲಕ ಬನ್ನಿಮಂಟಪದವರೆಗೂ ತೆರಳಿ ತಾಲೀಮು ಯಶಸ್ವಿಗೊಳಿಸಿದರು.
ಅಭಿಮನ್ಯು ಆನೆಗೆ ಪೂರ್ಣ ತೂಕದ ತೂಕ ಹಾಕಲಾಗಿತ್ತು. (ನಾಮ್ದಿ, ಗಾದಿ, ಮರದ ಅಂಬಾರಿ, ಮರಳಿನ ಚೀಲ ಸೇರಿದಂತೆ ಸುಮಾರು 1000 ಕೆಜಿ) ತೂಕ ಹೊತ್ತ ಅಭಿಮನ್ಯು ಪೂರ್ಣ ತಾಲೀಮಿನಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಿದೆ ಎಂದು ಡಿಸಿಎಫ್ ಸೌರಭ್ ಕುಮಾರ್ ಮಾಹಿತಿ ನೀಡಿದರು.
ವರದಿ: ನಂದಿನಿ ಮೈಸೂರು
