ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬರದು, ದಾನಿಗಳು ವಿದ್ಯಾರ್ಥಿ ಗಳಿಗೆ ನಿಡಿದ ಹಣವನ್ನು ಉಪಯೊಗ ಮಾಡಿ ಕೊಳ್ಳಿ-ಸಿತಾರಾಮರಾವ್ ಕಟ್ಟಿನಕೆರೆ.
ಸಾಗರ:“ವಿಧ್ಯಾಪೋಷಕ ಸಂಸ್ಥೆ ಕಳೆದ 23 ವರ್ಷಗಳಿಂದ ಸಮಾಜದಲ್ಲಿ ಇರುವ ಬಡ ವಿದ್ಯಾರ್ಥಿ ಗಳಿಗೆ ಮುಂದಿನ ಓದಲ್ಲಿಕ್ಕೆ ದಾನಿ ಗಳಿಂದ ಪಡೆದು ವಿತರಿಸುವ ಮೂಲಕ ವಿದ್ಯಾರ್ಥಿ ಗಳಿಗೆ ದಾರಿ ದೀಪ ವಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ನೌಕರಿ,ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿ ಗಳಾಗಿ, ಉತ್ತಮ ನಾಗರಿಕರಾಗಿ ,ದೇಶದ ಅಭಿವೃದ್ಧಿ ಗೆ ಸಹಕಾರಿಸಿ. ನಿವು ಸಹ ನಿಮ್ಮ ಹಳ್ಳಿ ಯು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅರ್ಥಿಕ ಸಹಾಯ ಮಾಡಿ” ಎಂದು ಸಿತಾರಾಮ ರಾವ್ ಕಟ್ಟಿನಕೆರೆ, ದಾನಿ ಗಳು, ಪ್ರಗತಿ ಪರ ಕೃಷಿಕ ರು, ಬ್ರಾಹ್ಮಣ ಸಮಾಜದ ಹಿರಿಯರು ರವರು ವಿದ್ಯಾ ಪೋಷಕ್ ಧಾರವಾಡ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಂಡುರಂಗ ಟಿ.ವಿ ಅಧ್ಯಕ್ಷ ರು ಸುವಿಧಾ, ಮತ್ತು ದಾನಿಗಳು, ಸತೀಶ್ ಕೆ.ಇ.ಎಮ್ ವಿದ್ಯಾ ಪೋಷಕ್ ಧಾರವಾಡ, ಅಶ್ವಿನಿ ಕುಮಾರ್ ಧರ್ಮದರ್ಶಿ ಗಳು ಶಂಕರ ಮಠ ಮತ್ತು ಶಿವಮೊಗ್ಗ ಜಿಲ್ಲಾ ವಿದ್ಯಾ ಪೋಷಕ್ ಸಂಚಾಲಕರು, ವಿಜಯ ವಾಮನ್ ಶಿಕ್ಷಣ ತಜ್ಞರು, ಭಾಗವಹಿಸಿ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮ ದ ಮೊದಲು ಪ್ರಾರ್ಥನೆ ಶಸಿಪ್ರಿಯ,ಸ್ವಾಗತ ನಮೀತ ಹೆಗಡೆ , ವಿದ್ಯಾ ಪೋಷಕ್ ನೆಡೆದು ಬಂದ ದಾರಿ ಕವಲಕೊಡು ವೆಂಕಟೇಶ್,ರತ್ನ ಹಿಪ್ಪರಗಿ,ಸ್ವಯಂಮ ಸೇವಕರ ಅನುಭವನ್ನು ಗಣಪತಿ ಹನೆಗೆರೆ, ವಿದ್ಯಾರ್ಥಿಗಳ ಅನಿಸಿಕೆಯಾನ್ನು ಶರವಣ ಪಂಡಿತ,ನವ್ಯಭಟ್, ವಂದನೆಗಳನ್ನು ಎ.ಎಮ್.ನಾಯಕ್, ಕಾರ್ಯಕ್ರಮ ವನ್ನು ಪ್ರತಿಕಾ.ಕೆ.ಎಸ್. ನಿರೂಪಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ದಾನಿ ಗಳು, ಸ್ವಯಂ ಸೇವಕ ರಂದು, ವಿದ್ಯಾರ್ಥಿ ಗಳು ಭಾಗವಹಿಸಿದ್ದರು.