ಡಾ . ರಾಜಕುಮಾರ್ ಅವರ ಕುಟುಂಬದ ಮೂರನೆಯ ತಲೆಮಾರು ಯುವ ರಾಜಕುಮಾರ್.

ಡಾ . ರಾಜಕುಮಾರ್ ಅವರ ಕುಟುಂಬದ ಮೂರನೆಯ ತಲೆಮಾರು ಯುವ ರಾಜಕುಮಾರ್.

ಡಾ . ರಾಜಕುಮಾರ್ ಅವರ ಮನೆಯ ಮೂರನೇ ತಲೆಮಾರು ಬೆಳ್ಳಿ ಪರದೆಯಮೇಲೆ ಆರ್ಭಟಿಸಲು ಬಾರೀ ತಯಾರಿ ಪಡೀತಿದೆ… ರಾಘವೇಂದ್ರ ರಾಜಕುಮಾರ್ ಅವರ ಎರಡನೆಯ ಮಗನಾದ “ಯುವ ರಾಜಕುಮಾರ್” ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಮುನ್ನ, ಆಗತ್ಯೆ ಪೂರ್ವ ಸಿದ್ಧತೆಗಳನ್ನು ಬಹಳ ಶ್ರದ್ದೆಯಿಂದ ಪೂರೈಸಿದ್ದಾರೆ.

ಈ ಹಿಂದೆ ರಣಧೀರ ಕಂಠೀರ “RK” ಅನ್ನೋ ಶೀರ್ಷಿಕೆ ಅಡಿಯಲ್ಲಿ ಚಿತ್ರವೊಂದರ ತಾಯಾರಿ ನಡೆದಿದ್ದು ಅದರ ಟೀಸರ್ ಕೂಡ ಹೊರ ಬಂದಿತ್ತು… ಎರಡು ಹಾಳೆಯ ಉದ್ದದ ಡೈಲಾಗನ್ನ ಬಲು ಚಂದವಾಗಿ ಹೇಳಿದ್ರು ಯುವ ರಾಜಕುಮಾರ್ , KGF ಸಿನಿಮಾದ ಸಹ ನಿರ್ದೇಶಕರಾದ ಪುನೀತ್ ರುದ್ರನಾಗ ಅನ್ನೋರು ಈ ಸಿನಿಮಾದ ನಿರ್ದೇಶಕರು ಕಾರಣಾ0ತರಗಳಿಂದ ಈ ಸಿನಿಮಾ ಮುಂದೂಡಲಾಗಿದ್ದು ಆದ್ರೆ ಇದೀಗ kgf ನ ನಿರ್ಮಾತ್ರುಗಳಾದ ಹೊಂಬಾಳೆ ಸಿನಿಮಾ ಸಂಸ್ಥೆ ಅವರೇ ಯುವ ಅವರನ್ನ ನಾಯಕನಾಗಿ ಲಾಂಚ್ ಮಾಡಲು ಮುಂದಾಗಿದ್ದಾರೆ.. ಸಿನಿಮಾದ ಹೆಸರೇ “ಯುವ “! ಈ ಸಿನಿಮಾಗೆ ಕುದ್ದು ಕಥೆ ಬರೆದು, ಆಕ್ಷನ್ ಕಟ್ ಹೇಳುವ ಜವಾಬ್ದಾರಿ ಸಂತೋಷ್ ಆನಂದ್ ರಾಮ ಅವರದಾಗಿದೆ.ಯಶ್ ಅಭಿನಯದ Mr and Mrs ರಾಮಚಾರಿ, ಪುನೀತ್ ರಾಜಕುಮಾರ್ ಅವರಿಗೆ ಯುವರತ್ನ ಹಾಗು ರಾಜಕುಮಾರ ಅಂತಃ ಸಧಭಿರುಚಿಯ ಹಿಟ್ ಸಿನಿಮಾಗಳನ್ನ ನೀಡಿದ ಬಳಿಕ, ಇದೀಗ ಡಾ.ರಾಜಕುಮಾರ್ ಕುಟುಂಬದ ಮೂರನೇ ತಲೆಮಾರಿ ಜೊತೆಗೆ ಅಂತದ್ದೇ ಒಳ್ಳೆಯ ಸಿನಿಮಾದ ತಯಾರಿ ಭರದಿಂದ ಸಾಗ್ತಿದೆ.

. ಈ ಸಿನಿಮಾಗಾಗಿ ನಟ ಯುವ ಅವರು ಕಿಕ್ ಬಾಕ್ಸಿಂಗ್ ಕಲಿಯುವುದರೆ ಜೊತೆಗೆ ಅಭಿನಯದ ತರಬೇತಿಯನ್ನು ಪಡೀತಿದ್ದಾರೆ, ಕಾಂತರ ಖ್ಯಾತಿಯ ಸಪ್ತಮಿ ಗೌಡ ಯುವನ ಜೋಡಿಯಾಗಿ ಕಾಣಾಲಿದ್ದಾರೆ.ಈ ಸಿನಿಮಾದ ಸಬ್ಜೆಕ್ಟ್ -ಕಥೆಯನ್ನ ಪುನೀತ್ ರಾಜಕುಮಾರ್ ಅವರು ಸಹ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿ ALL THE BEST ಅನ್ನೋ ಮೂಲಕ ಖುಷಿ ವ್ಯಕ್ತಪಡಿಸಿದ್ದರು.

ವರದಿ: P. ಘನಶ್ಯಾಮ್ – ಬೆಂಗಳೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವಿವರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400
Website :www.shivamotors.net

Leave a Reply

Your email address will not be published. Required fields are marked *