ನಟ ಸುದೀಪ್​ ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ.

ನಟ ಸುದೀಪ್​ ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ.

ನಟ ಸುದೀಪ್​ ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ. ಅದಕ್ಕೆ ಈಗಾಗಲೇ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿಯನ್ನು ಸುದೀಪ್ ಅವರು ಭೇಟಿ ಮಾಡಿದ್ದಾರೆ. ಆಕೆಯ ಆರೋಗ್ಯ ವಿಚಾರಿಸಿದ್ದಾರೆ. ಉಡುಗೊರೆ ಮತ್ತು ಆಟೋಗ್ರಾಫ್​ ನೀಡುವ ಮೂಲಕ ಆ ಪುಟ್ಟ ಅಭಿಮಾನಿಯ  ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ ಕಿಚ್ಚ ಸುದೀಪ್​. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಕಿಚ್ಚ ಸುದೀಪ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಆದರೆ ಎಲ್ಲರಿಗೂ ಅಂಥ ಅವಕಾಶ ಸಿಗುವುದಿಲ್ಲ. ತಮ್ಮ ವಿಶೇಷ ಅಭಿಮಾನಿಗಳ ಬಗ್ಗೆ ಸುದೀಪ್​ ಅವರು ಯಾವಾಗಲೂ ಕಾಳಜಿ ವಹಿಸುತ್ತಾರೆ. ಬಾಲಕಿ ಸಾಕ್ಷಿ ಕೂಡ ಅಂಥ ಓರ್ವ ಅಭಿಮಾನಿ. ಆಕೆಯ ಬಯಕೆಯನ್ನು ತಿಳಿದುಕೊಂಡ ಸುದೀಪ್​ ಅವರು ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ್ದಾರೆ

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *