
9 ವರ್ಷ ಪೂರೈಸಿದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ನೇತೃತ್ವದ ಕೇಂದ್ರ ಸರ್ಕಾರ – ಮಾಜಿ ಸಚಿವರಾದ ಹೆಚ್.ಹಾಲಪ್ಪ

ಇಂದು ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ನವರೊಂದಿಗೆ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಯಲ್ಲಿ ಶಿವಮೊಗ್ಗದ ಪ್ರೇರಣಾ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ, “ಜನಸಭೆ” ಸಾರ್ವಜನಿಕರ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಸಂಸದರಾದ ಬಿ.ವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ ವಿಜಯೇಂದ್ರ, ಚನ್ನಬಸಪ್ಪ, ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಡಿ.ಎಸ್ ಅರುಣ್, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಆರ್.ಕೆ ಸಿದ್ದರಾಮಣ್ಣ.

ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್, ಗಿರೀಶ್ ಪಟೇಲ್, ನಟರಾಜ್, ಡಾ. ರಾಜನಂದಿನಿ ಕಾಗೋಡು ಹಾಗೂ ಪಕ್ಷದ ವಿವಿಧ ಹಂತದ ನಾಯಕರು, ಮುಖಂಡರು ಉಪಸ್ಥಿತರಿದ್ದರು.
