
ರೂಪಲಿ ನಾಯ್ಕ್ ಕಾರವಾರದ ಶಾಸಕರು ನಾಮಪತ್ರ ಸಲ್ಲಿಕೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾರವಾರ ನಗರಸಭೆ ಆವರಣದಲ್ಲಿರುವ ಚುನಾವಣಾ ಕಚೇರಿಗೆ ಗೋವಾ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ ಸಾವಂತ, ಶ್ರೀ ಪ್ರಮೋದ ಮಧ್ವರಾಜ್, ವಿಧಾನ ಪರಿಷತ್ ಶಾಸಕರಾದ ಶ್ರೀ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷರಾದ ಶ್ರೀ ಡಾ.ನಿತಿನ್ ಪಿಕಳೆ, ಪಕ್ಷದ ಪ್ರಮುಖರಾದ ಶ್ರೀ ಪ್ರಸನ್ನ ಕೆರೆಕೈ, ಶ್ರೀ ಎನ್.ಎಸ್.ಹೆಗಡೆ ಹಾಗೂ ಕಾರವಾರ ನಗರ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಕುರ್ಡೇಕರ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಸುಭಾಷ ಗುನಗಿ, ಅಂಕೋಲಾ ಮಂಡಲ ಅಧ್ಯಕ್ಷರಾದ ಶ್ರೀ ಸಂಜಯ ನಾಯ್ಕ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ನನ್ನ ಕ್ಷೇತ್ರದ ಜನತೆಯೊಟ್ಟಿಗೆ ಹೆಜ್ಜೆ ಹಾಕುತ್ತ ಬಂದು ನಾಮಪತ್ರ ಸಲ್ಲಿಸಲಾಯಿತು.

ದೇವಮಾನವರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬಿಜೆಪಿಗೆ ಎಲ್ಲೆಡೆಯಿಂದ ಅಪಾರ ಬೆಂಬಲ ಸಿಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಕ್ರೀಡೆ, ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೂ ಉತ್ತಮ ಸೇವೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ವಿಶ್ವಾನಾಥ ಕಾರಿಡಾರ ನಿರ್ಮಾಣದಿಂದಾಗಿ ಈ ಕಲಿಯುಗದಲ್ಲೂ ಸತ್ಯಯುಗದ ಝಲಕ್ ನೋಡಬಹುದಾಗಿದೆ. ಕರೋನಾ ಮತ್ತು ಪ್ರವಾಹದಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಇದರ ನಂತರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರಿಂದ ಕಾರವಾರ ಮತ್ತು ಅಂಕೋಲಾ ಕ್ಷೇತ್ರದಲ್ಲಿ ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗಿವೆ.

ಕಾರ್ಯಕರ್ತರು ಮತ್ತು ಮತದಾರರು ನನ್ನ ಪಾಲಿನ ದೇವರು. ಇಂದಿಲ್ಲಿ ನೆರೆದಿರುವ ಕಾರ್ಯಕರ್ತರ ಮತ್ತು ಮತದಾರರ ಉತ್ಸಾಹ ನೋಡಿ ಆನಂದ ಭಾಷ್ಪ ಬಂತು. ಅವರ ಆಶೀರ್ವಾದ ಇರುವುದರಿಂದಲೇ ನನಗೆ ಪಕ್ಷ ಎರಡನೇ ಬಾರಿಗೆ ಟಿಕೆಟ್ ನೀಡಿದೆ. ಅವರಿಗೆ ನಾನು ಚಿರ ಋಣಿಯಾಗಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು. ದೇಶಾದ್ಯಂತ ಪ್ರಧಾನಿ ಮೋದಿ ಅವರ ಅಲೆ ಇದೆ. ಅದರ ಜೊತೆಗೆ ಪ್ರತಿಯೊಬ್ಬ ಕಾರ್ಯಕರ್ತರೂ ಪ್ರತಿಯೊಂದು ಮನೆಗಳಿಗೆ ಹೋಗಿ ನಿಮ್ಮ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂದು ಕೇಳಿದಾಗ ನಿಮಗೆ ನೀಡಿರುವ ಕರಪತ್ರದಲ್ಲಿರುವ ವಿಷಯವನ್ನು ಅವರಿಗೆ ಮನರಿಕೆ ಮಾಡಿಕೊಡಬೇಕು. ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಬೇಕು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.