ಜೀವ ವೈವಿಧ್ಯ ವಲಯದ ಸೇರ್ಪಡೆಗೆ ಮರಾಠಿ ಜನರ ವಿರೋಧ , ಗ್ರಾಮದಲ್ಲಿ ಪಡಿತರ ವಿತರಣೆಗೆ ಸಿಗ್ಗಲು ಗ್ರಾಮಸ್ಥರ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ನಿರ್ಧಾರ

ಸಾಗರ: ಜೀವ ವೈವಿಧ್ಯ ವಲಯದ ಸೇರ್ಪಡೆಗೆ ಮರಾಠಿ ಜನರ ವಿರೋಧ, ಗ್ರಾಮದಲ್ಲಿ ಪಡಿತರ ವಿತರಣೆಗೆ ಸಿಗ್ಗಲು ಗ್ರಾಮಸ್ಥರ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ನಿರ್ಧಾರ.

ನೂರಾರು ವರ್ಷಗಳಿಂದ ಬದುಕು ಕಟ್ಟಕೊಂಡಿರುವ ಜನ ವಸತಿ ಪ್ರದೇಶಗಳನ್ನು ಜೀವ ವೈವಿಧ್ಯ ತಾಣ, ಹೆಸರಿನಲ್ಲಿ ರೈತರ ಮೇಲೆ ದೌರ್ಜನ್ಯ ಹಾಗೂ ಗ್ರಾಮದ ಹಲವೆಡೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ತಾತ್ಸಾರ ಹಿನ್ನಲೆಯಲ್ಲಿ ಶರಾವತಿ ಹಿನ್ನೀರಿನ ಎಸ್ ಎಸ್ ಭೋಗ್ ಹಾಗೂ ಚನ್ನಗೊಂಡ ಗ್ರಾಮದ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಎಸ್ ಎಸ್ ಭೋಗ್ ಗ್ರಾಮದ ಸುಮಾರು 95 ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿರುವ ಮರಾಠಿ, ಕೊಡನವಳ್ಳಿ,ಆಡಗಳಲೆ. ಗ್ರಾಮದ ಹದಿಮೂರು ಸರ್ವೇ ನಂ ಗಳಲ್ಲಿ ಸುಮಾರು 3.857.17 ಎಕರೆ ಪ್ರದೇಶವನ್ನು ಈಚೆಗೆ ಅಂಬಾರಗುಡ್ಡ ಜೀವ ವೈವಿಧ್ಯ ತಾಣಕ್ಕೆ ಹಕ್ಕು ಬದಲಾವಣೆ ಮಾಡಿ ಪಹಣಿ ಪತ್ರ ನಮೂದಾಗಿದ್ದು ಜನ ವಸತಿ ಪ್ರದೇಶಗಳನ್ನು ಜೀವ ವೈವಿಧ್ಯ ತಾಣದಿಂದ ಕೈ ಬಿಡಬೇಕು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನೂರಾರು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಇದರಿಂದಾಗಿ ರೈತರಿಗೆ ಭೂಮಿ ಹಕ್ಕು ಕೈ ತಪ್ಪುವ ಆತಂಕ ಎದುರಾಗಿದೆ.

ಚನ್ನಗೊಂಡ ಗ್ರಾಮದಲ್ಲೂ ಬಹಿಷ್ಕಾರದ ಕೊಗು:

ಇನ್ನು ಕರೂರು ಹೋಬಳಿಯ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೋಡಿ, ಯಲ್ಲದೋಡಿ, ಯಕ್ಷೆಮಕ್ಕಿ, ನಾವಳಮಕ್ಕಿ, ಚಂಬಳಿ, ಔಡಳ್ಳಿ, ಸಿಗ್ಗಲು ಹಳ್ಳಿಗಳ ಸುಮಾರು ಸುಮಾರು 37 ಕುಟುಂಬಗಳು ವಾಸಿಸುತ್ತಿದ್ದು ಜನರು ದಿನನಿತ್ಯ ಅಗತ್ಯ ವಸ್ತುಗಳು, ಪಡಿತರ, ಬ್ಯಾಂಕ್, ಗ್ರಾಮ ಪಂಚಾಯ್ತಿ ಕಚೇರಿಗೆ ಸುಮಾರು 55 ಕಿಲೋ ಮೀಟರ್ ದೂರ ಸಾಗಬೇಕಿದೆ. ಗ್ರಾಮ ಪಂಚಾಯ್ತಿ ಕೇಂದ್ರ ಕೋಗಾರು ಅಂಚೆ ತಲುಪಲು ಇದ್ದ ಲಾಂಚ್ ಮಾರ್ಗ ಸರಿಪಡಿಸುವಂತೆ ಹಿಂದಿನ ಉಪವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್ ಅವರಿಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಿಗ್ಗಲಿನಿಂದ ಕೋಗಾರಿಗೆ ನೂತನ ಲಾಂಚ್ ಸೇವೆ ಆರಂಭಿಸಿದ್ದರು ಆದರೆ ಆದು ಸ್ಥಳೀಯ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ಕೆಲ ತಿಂಗಳಲ್ಲೆ ಸ್ಥಗಿತಗೊಂಡಿತ್ತು. ಅಲ್ಲದೆ ಈ ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಈ ಭಾಗದ ಜನರು ತಿಂಗಳುಗಳ ಕಾಲ ಕತ್ತಲೆಯಲ್ಲೆ ಜೀವನ ನೆಡೆಸಬೇಕಿದೆ. ಸುಮಾರು 50ಕ್ಕೂ ಅಧಿಕ ರೈತರು 94ಸಿ ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ವರೆಗೂ ಹಕ್ಕು ಪತ್ರ ಸಿಗದಿರುವುದರಿಂದ ಸಾಕಷ್ಟು ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದೇವೆ ಎಂಬುದು ರೈತರ ಅಳಲು.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುದಾಗಿ ಬರವಸೆಗಳನ್ನು ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಹುಸಿ ಬರವಸೆ ನೀಡುತ್ತಾರೆ. ಆದರೆ ಚುನಾವಣೆ ನಂತರ ಗ್ರಾಮದತ್ತ ಸುಳಿಯುದೇ ಇಲ್ಲ ಗ್ರಾಮದ ಜನರಿಗೆ ಅಗತ್ಯವಿರುವ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು ಇಲ್ಲದಿದ್ದರೆ ಜೀವನ ಸಾಗಿಸುವುದು ಸವಾಲಾಗುತ್ತಿದೆ ಎಂಬುದು ಗ್ರಾಮಸ್ಥರಾದ ಗಣಪತಿ ಸಿಗ್ಗಲು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕುಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳ ಆಯ್ಕೆಯನ್ನೆ ಬಹಿಷ್ಕರಿಸುತ್ತೇವೆ. ಈ ಬಗ್ಗೆ ಮಾರ್ಚ 29 ರಂದು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇವೆ. ಎಂದು ಸಿಗ್ಗಲು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಹಲವು ದಶಕಗಳಿಂದ ಗಣಿಗಾರಿಕೆ, ಅರಣ್ಯ ಇಲಾಖೆಯಿಂದ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇವೆ. ಈಗ ಏಕಾಏಕಿ ಜನ ವಸತಿ ಪ್ರದೇಶಗಳನ್ನು ಜೀವ ವೈವಿಧ್ಯ ವಲಯಕ್ಕೆ ಸೇರಿಸಿರುವುದು ಈ ಮೂಲಕ ನಮ್ಮ ಬದುಕನ್ನೆ ಕಸಿದುಕೊಂಡಿದ್ದಾರೆ.

ಕಮಲಾಕ್ಷಿ,
ಮುರಳ್ಳಿ, ಗ್ರಾಮಸ್ಥೆ.

ವರದಿ :- ಓಂಕಾರ ಎಸ್. ವಿ. ತಾಳಗುಪ್ಪ

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *