ಸಾಗರದ ಕೆಲವೇ ಸಾವಿರ ಕುಟುಂಬಗಳಿಗೆ ಮಾತ್ರ ರಾಷ್ಟ್ರ ಧ್ವಜ ವನ್ನು ನೀಡುತ್ತಿದ್ದಿರಿ ಹಗಾದರೆ ಉಳಿದವರು ಭಾರತ್ತೀಯರಲ್ಲವೇ? – ಲಕ್ಷ್ಮಣ್ ಸಾಗರ್ ತಾಲ್ಲೂಕು ಸಂಚಾಲಕರು DSS ಸಾಗರ

ಸಾಗರ : ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ 1 ಲಕ್ಷ 80ಸಾವಿರ ಕುಟುಂಬಕ್ಕಿಂತ ಹೆಚ್ಚು ಕುಟುಂಬಗಳಿವೆ ಆದರೆ ಕೆಲವೇ ಸಾವಿರ ಕುಟುಂಬಗಳಿಗೆ ಮಾತ್ರ ರಾಷ್ಟ್ರ ಧ್ವಜ ವನ್ನು ನೀಡುತ್ತಿದ್ದಿರಿ ಹಗಾದರೆ ಉಳಿದವರು ಭಾರತ್ತೀಯರಲ್ಲವೇ? – ಲಕ್ಷ್ಮಣ್ ಸಾಗರ್ ತಾಲ್ಲೂಕು ಸಂಚಾಲಕರು DSS ಸಾಗರ.

ಜೈ ಹೋ ಭಾರತ್. ಭಾರತ ದೇಶ 75ನೇ ಸ್ವಾತಂತ್ರ ಅಮೃತ ಮಹೋತ್ಸವ ವನ್ನು ಆಚರಿಸುತ್ತಿರುವುದು ಭಾರತಿಯರಾದ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ

ಈ ಸಂದರ್ಭದಲ್ಲಿ ಸಾಕ್ಷಿಯಾಗುತ್ತಿರುವ ಕೊಟ್ಯಾಂತರ ಭಾರತಿಯರ ಹೃದಯ ಸ್ಪಶಿ೯ ಕ್ಷಣಕ್ಕೆ ನಾವು ಕಾತುರರಾಗಿದ್ದೆವೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ಸ್ವತಂತ್ರ ಹೋರಾಟಗಾರರಿಗೂ ಹಾಗೂ ಇದುವರೆಗೂ ಈ ದೇಶವನ್ನು ನೆರೆಯ ದೇಶಗಳಿಂದ ಮತ್ತು ಈ ರಾಷ್ಟ್ರದಲ್ಲಿ ಶಾಂತಿ ಸುವ್ಯವಸ್ಥೆಯನ್ನ ಕಾಪಾಡಿ ನಾವು ನೀವು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ವೀರಸೇನಾನಿಗಳಿಗೆ ನಮ್ಮದೊಂದು ಸಲಾಮು

ಈ ದೇಶಕ್ಕೆ ಭದ್ರವಾದ ಸಂವಿಧಾನವನ್ನು ರೂಪಿಸಿದ ಪ್ರಜಾಪ್ರಭುತ್ವ ವನ್ನು ಗಟ್ಟಿಗೊಳಿಸಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೂ ಮತ್ತು ಸಂವಿಧಾನ ಸಮಿತಿಯ ಎಲ್ಲಾ ಸದಸ್ಯರಿಗೂ ಭಾರತಿಯರಾದ ನಮ್ಮದೊಂದು ಸಲಾಮು

ಪ್ರಜಾಪ್ರಭುತ್ವ ವನ್ನು ಸ್ಥಿರವಾಗಿ ತೆಗೆದುಕೊಂಡು ಹೋಗುತ್ತಿರುವ ನಾಗರಿಕರ ಹಕ್ಕು ಮತ್ತು ಕತ೯ವ್ಯ ವನ್ನು ರಕ್ಷಿಸುವಂತಹ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಪರಿಶ್ರಮಿಸುತ್ತಿರುವ ಕೆಲವೇ ಕೆಲವು ರಾಜಕೀಯ ಮುತ್ಥಧಿಗಳಿಗೆ ನಮ್ಮೆಲ್ಲರ ಭಾರತೀಯರ ಪರವಾಗಿ ನಮಸ್ಕಾರಗಳು.

75ನೇ ಸ್ವಾತಂತ್ರ ಅಮೃತ ಮಹೋತ್ಸವದಲ್ಲಿ ಬಡವರು ಮದ್ಯಮ ವಗ೯ದವರು ಪ್ರತಿ ದಿನ ಬಳಸುವ ಅಗತ್ಯ ವಸ್ತುಗಳಾದ ಗ್ಯಾಸ್,ಆಹಾರ ಪದಾರ್ಥಗಳು ಪೆಟ್ರೋಲ್ ಎಣ್ಣೆ ಕಾಳುಗಳ ದರಗಳು ಗಗನಕ್ಕೆರಿದ್ದು ಜನರು ಸಂಕಷ್ಟ ದಲ್ಲಿದ್ದಾರೆ 75ನೇ ಸ್ವಾತಂತ್ರ್ಯೊಸ್ಥವ ಸಂಭ್ರಮ ಸವಿಯಲು ಬೆಲೆ ಏರಿಕೆಗಳು ಅಡ್ಡಿ ಯಾಗಿವೆ.

ಕೇಂದ್ರ ಹಾಗೂ ರಾಜ್ಯ ಸಕಾ೯ರಗಳು ಈ ಎಲ್ಲ ಅಗತ್ಯ ವಸ್ತುಗಳ ತೆರಿಗೆಯನ್ನ ರದ್ದು ಗೊಳಿಸಿ ಬಡವ ಹಾಗೂ ಮಧ್ಯಮ ವರ್ಗದವರು ಭಾರತೀಯರು ಸಂಭ್ರಮಿಸುವಂತೆ ಕೋರುತ್ತೇವೆ

ಕೇಂದ್ರ ಮತ್ತು ರಾಜ್ಯ ಸಕಾ೯ರಗಳು ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ವನ್ನು ಹಾರಿಸುವಂತೆ ಆದೇಶ ನೀಡಿರುತ್ತಿರಿ ಆದರೆ ಪ್ರತಿ ಮನೆಮನೆಗೂ ರಾಷ್ಟ್ರ ಧ್ವಜ ವನ್ನು ನೀಡಲು ಮುಂದಾಗಿರುವುದಿಲ್ಲ.

ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ 1 ಲಕ್ಷ 80ಸಾವಿರ ಕುಟುಂಬಕ್ಕಿಂತ ಹೆಚ್ಚು ಮನೆಗಳಿವೆ ಆದರೆ ಕೆಲವೇ ಸಾವಿರ ಕುಟುಂಬಗಳಿಗೆ ಮಾತ್ರ ರಾಷ್ಟ್ರ ಧ್ವಜ ವನ್ನು ನೀಡುತ್ತಿದ್ದಿರಿ ಆಗಾದರೆ ಉಳಿದವರು ಭಾರತ್ತೀಯರಲ್ಲವೇ?

ಈ ಸಂದರ್ಭದಲ್ಲಿ ಎಲ್ಲಾ ಭಾರತೀಯರನ್ನು ಒಟ್ಟು ಗೂಡಿಸುವ ಬದಲು ಭಾರತೀಯರನೆ ವಿಂಗಡಿಸುವುದು ಎಷ್ಟು ಸರಿ?

ಇದಕ್ಕೆ ಸಂಬಂಧಪಟ್ಟವರೇ ಉತ್ತರ ಹೇಳಬೇಕು !

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *